ಮಹಿಳೆ ನಾಪತ್ತೆ
Update: 2022-04-16 20:01 IST
ಮಂಗಳೂರು : ನಗರದ ಚೇಳಾರು ಗ್ರಾಮದ ಕರಂಚಿಲ್ ಹೌಸ್‌ನಲ್ಲಿ ವಾಸವಾಗಿದ್ದ ಪ್ರೇಮಾ (52) ಎಂಬವರು ಎ.5ರಿಂದ ಕಾಣೆಯಾಗಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5.2 ಇಂಚು ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಚೂಡಿದಾರ್ ಧರಿಸಿರುತ್ತಾರೆ. ಕನ್ನಡ, ತುಳು ಮಾತನಾಡುತ್ತಾರೆ. ಶ್ರವಣಯಂತ್ರ ಅಳವಡಿಸಿಕೊಂಡಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಸುರತ್ಕಲ್ ಪೊಲೀಸ್ ಠಾಣೆ (0824-2220540, ಮೊ.ಸಂ: 9480802345)ಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.