×
Ad

ದೇವರ ಅನುಗ್ರಹದಿಂದ ಸಾರ್ಥಕ ಬದುಕು ಸಾಧ್ಯ: ಒಡಿಯೂರು ಶ್ರೀ

Update: 2022-04-17 18:35 IST

ಮಲ್ಪೆ : ಮನುಷ್ಯನಿಗೆ ಆಗಾಗ ಕಷ್ಟಗಳು ಎದುರಾಗಬೇಕು. ಆಗ ಮಾತ್ರ ದೇವರ ನೆನಪು ಬರುತ್ತದೆ. ದೇವರ ಅರಿವು ಮತ್ತು ಇರುವಿನ ಅರಿವು ಮೂಡಿದಾಗ ಮಾತ್ರ ಜಾಗೃತಿ ಉಂಟಾಗುತ್ತದೆ. ಪರಿಶ್ರಮದೊಂದಿಗೆ ದೇವರ ಅನುಗ್ರಹ ಇದ್ದಾಗ ಮಾತ್ರ ಸಾರ್ಥಕ ಬದುಕು ಸಾಧ್ಯ ಎಂದು ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

ಕೆಳಾರ್ಕಳಬೆಟ್ಟು ವಿಷ್ಣುಮೂರ್ತಿ ನಗರ ಶ್ರೀವೀರಮಾರುತಿ ವ್ಯಾಯಾಮ ಶಾಲೆಯ ಶ್ರೀದೇವರ ನೂತನ ರಜತ ಬಿಂಬ ಪ್ರತಿಷ್ಠೆ ಪ್ರಯುಕ್ತ ಗುರುವಾರ ನಡೆದ ಬ್ರಹ್ಮಕಲಶೋತ್ಸವ ಮತ್ತು ಹನುಮ ಜಯಂತಿ ಉತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ  ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಪು ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮುಂಬೈ ನಿವೃತ್ತ ಬ್ಯಾಂಕ್ ಉದ್ಯಮಿ ಎಲ್.ಎಂ.ತೋನ್ಸೆ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಮತ್ಸ್ಯೋದ್ಯಮಿಗಳಾದ ಆನಂದ ಅಮೀನ್, ಶೇಖರ್ ಜಿ.ಕೋಟ್ಯಾನ್, ಮಮತಾ ಶೆಟ್ಟಿ ಲಕ್ಷ್ಮೀನಗರ, ಕೆಳಾರ್ಕಳ ಬೆಟ್ಟು ಶ್ರೀದೇವಿ ಭೂದೇವಿ ಸಹಿತ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಸದಾನಂದ ನಾಯ್ಕ್, ದೀಪಕ್ ಕೊಪ್ಪಲ್‌ತೋಟ, ವೇದಮೂರ್ತಿ ಶ್ರೀಧರ್ ಭಟ್, ಮಂದಿರದ ಅರ್ಚಕ ಅಶೋಕ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ದೀಪಕ್, ಶ್ರಾವ್ಯ, ದಿಶಾನ್, ನಮ್ಯ, ಲಾವಣ್ಯ, ಮಾನಿಷ್, ವೈಷ್ಣವಿ ಅವರನ್ನು ಸಮ್ಮಾನಿಸ ಲಾಯಿತು. ವ್ಯಾಯಾಮ ಶಾಲೆಯ ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಸ್ವಾಗತಿಸಿದರು. ಸಚೇಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅನಿಲ್ ಪಾಲನ್ ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News