ಎ. 20: ರಮಝಾನ್ ಇಫ್ತಾರ್ ಕೂಟ
Update: 2022-04-17 19:50 IST
ಮಂಗಳೂರು: ಸದ್ಭಾವನಾ ವೇದಿಕೆ ಉಳ್ಳಾಲ ಮತ್ತು ಪೊಸಕುರಲ್ ಬಳಗದ ಸಂಯುಕ್ತ ಆಶ್ರಯದಲ್ಲಿ ಎ.20ರಂದು ಸಂಜೆ 5.15ಕ್ಕೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಯುನಿಟಿ ಹಾಲ್‌ನಲ್ಲಿ ರಮಝಾನ್ ಇಫ್ತಾರ್ ಕೂಟ ನಡೆಯಲಿದೆ.
ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬ್ ಮುಹಮ್ಮದ್ ಕುಂಞಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಸಿಪಿ ದಿನಕರ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಹರೀಶ್ ಕುಮಾರ್ ಬಿಎಂ., ಜಿಪಂ ಮಾಜಿ ಸದಸ್ಯ ಪೌಲ್ ರಾಲ್ಫ್ ಡಿಕೋಸ್ತ ಸೌಹಾರ್ದ ಸಂದೇಶ ನೀಡಲಿದ್ದಾರೆ. ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.