ಸಮಸ್ತ ಮದ್ರಸ ಪಬ್ಲಿಕ್ ಪರೀಕ್ಷೆ; ದ.ಕ.ಜಿಲ್ಲೆಗೆ ಶೇ. 97.34 ಫಲಿತಾಂಶ
ಮಂಗಳೂರು : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಮಾರ್ಚ್‌ನಲ್ಲಿ ಆನ್‌ಲೈನ್ ಮತ್ತು ಆಫ್ ಲೈನ್ ಮೂಲಕ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ.
ಐದು, ಏಳು, ಹತ್ತು, ಪ್ಲಸ್‌ಟು ತರಗತಿಗಳಲ್ಲಿ ನೋಂದಣಿ ಮಾಡಿದ 2,61,375 ವಿದ್ಯಾರ್ಥಿಗಳ ಪೈಕಿ 2,55,438 ಪರೀಕ್ಷೆ ಬರೆದಿದ್ದರು. ಆ ಪೈಕಿ 2,47,924 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.97.06 ಫಲಿತಾಂಶ ದಾಖಲಾಗಿದೆ.
ಇದರಲ್ಲಿ 2,749 ವಿದ್ಯಾರ್ಥಿಗಳು ಟಾಪ್ ಪ್ಲಸ್, 29,879 ಮಂದಿ ಡಿಸ್ಟಿಂಕ್ಷನ್, 77,559 ಫಸ್ಟ್ ಕ್ಲಾಸ್, 42,530 ಸೆಕೆಂಡ್ ಕ್ಲಾಸ್, 95,207 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಭಾರತದ 7,456 ಕೇಂದ್ರಗಳಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ 10,462 ಮದ್ರಸಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಫಲಿತಾಂಶವು www.samastha.info, www.samastha.info, www.result.samastha.info ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ.
ದ.ಕ.ಜಿಲ್ಲೆಗೆ ಶೇ.97.34 ಫಲಿತಾಂಶ
ದ.ಕ. ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 9166 ವಿದ್ಯಾರ್ಥಿಗಳ ಪೈಕಿ 8770 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.97.34 ತೇರ್ಗಡೆ ಹೊಂದುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
೧೫ ಮಂದಿಗೆ ಟಾಪ್ ಪ್ಲಸ್
ಜಿಲ್ಲೆಯಲ್ಲಿ 15 ಮಂದಿ ಟಾಪ್ ಪ್ಲಸ್ ಸ್ಥಾನದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಕುಂಬ್ರ ರೇಂಜ್ ಮಾಡಾವು ನುಸ್ರತುಲ್ ಇಸ್ಲಾಂ ಮದ್ರಸದ ಐದನೆ ತರಗತಿಯ ಅಫ್ರಾ ಫಾತಿಮಾ, ಗುರುಪುರ ರೇಂಜ್ ಅಸ್ರಾರ್ ನಗರ ರಹ್ಮಾನಿಯ ಮದ್ರಸದ ಏಳನೇ ತರಗತಿಯ ಫಾತಿಮಾ ಇರ್ಫತ್, ಪುತ್ತೂರು ರೇಂಜ್ ಬೊಳ್ವಾರು ಖಿಳ್ರಿಯಾ ಮದ್ರಸದ ಸಾನಿಯಾ ಮಿರ್ಝಾ ಮತ್ತು ಫಾತಿಮಾ ಅಜ್ಮಿನಾ, ದೇರಳಕಟ್ಟೆ ರೇಂಜ್ ಗ್ರೀನ್ ಗ್ರೌಂಡ್ ಮನಾರುಲ್ ಹುದಾ ಮದ್ರಸದ ಹತ್ತನೇ ತರಗತಿಯ ಮುಹಮ್ಮದ್ ಆಶಿಕ್, ಪುತ್ತೂರು ರೇಂಜ್ ಪರ್ಲಡ್ಕ ಹಯಾತುಲ್ ಇಸ್ಲಾಂ ಮದ್ರಸದ ಆಶಾ ಆಯಿಷಾ, ಕುಂಬ್ರ ರೇಂಜ್ ಮಾಡನ್ನೂರು ನೂರುಲ್ ಇಸ್ಲಾಂ ಮದ್ರಸದ ಅಬ್ದುಸ್ಸಮದ್, ಮುಹಮ್ಮದ್ ಸದಕತುಲ್ಲಾ, ಅಹ್ಮದ್ ಮಿಕ್ದಾದ್, ಸುಹೈನಾ, ಆಯಿಷಾ ಮುಫೀದಾ, ಸೌದಾ, ಆಯಿಶಾ ಶಜ್ನಾ, ಪುತ್ತೂರು ರೇಂಜ್ ಪರ್ಲಡ್ಕ ಹಯಾತುಲ್ ಇಸ್ಲಾಂ ಮದ್ರಸದ ಪ್ಲಸ್ ಟು ತರಗತಿ ಖದೀಜಾ ಮರ್ಜಾ, ಕೂರ್ನಡ್ಕ ರೇಂಜ್ ಚಾಪಳ್ಳ ಹಿದಾಯತುಲ್ ಇಸ್ಲಾಂ ಮದ್ರಸದ ಮಾಜಿದಾ 97+ ಅಂಕ ಗಳಿಸಿ ಟಾಪ್ ಪ್ಲಸ್ ಪಡೆದಿದ್ದಾರೆ.
ಇದರಲ್ಲಿ ಮಾಡನ್ನೂರು ಮದ್ರಸದ 10ನೇ ತರಗತಿಯ ಎಲ್ಲಾ 7 ಮಂದಿ ವಿದ್ಯಾರ್ಥಿಗಳು ಟಾಪ್ ಪ್ಲಸ್ ಗಳಿಸುವ ಮೂಲಕ ಜಿಲ್ಲೆಯಲ್ಲಿ ದಾಖಲೆಯ ಪಲಿತಾಂಶ ತಂದಿದ್ದಾರೆ.
ಸೇ ಪರೀಕ್ಷೆ: ಒಂದು ವಿಷಯದಲ್ಲಿ ಮಾತ್ರ ಅನುತ್ತೀರ್ಣರಾದವರಿಗೆ 2022 ಮೇ 14,15 ರಂದು ಆಯಾ ಡಿವಿಷನ್ ಕೇಂದ್ರಗಳಲ್ಲಿ ನಡೆಯುವ ಸಪ್ಲಿಮೆಂಟರಿ ಸೇ ಪರೀಕ್ಷೆಯಲ್ಲಿ ಭಾಗವಹಿಸಬಹುದು.
www.samstha.info ವೆಬ್‌ಸೈಟ್‌ನಲ್ಲಿ ಮದ್ರಸ ಲಾಗಿನ್ ಮಾಡಿ ಎ.20ರಿಂದ 30ರ ತನಕ 180 ರೂ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕಾಗಿದೆ.
ಮರು ಮೌಲ್ಯಮಾಪನ: ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಅವಕಾಶವಿದ್ದು ಪ್ರತಿ ವಿಷಯವೊಂದಕ್ಕೆ ನೂರು ರೂ. ಶುಲ್ಕ ಪಾವತಿಸಿ ವೆಬ್‌ಸೈಟ್‌ನಲ್ಲಿ ಮದ್ರಸ ಲಾಗಿನ್ ಮಾಡಿ ಅರ್ಜಿ ಸಲ್ಲಿಸಬೇಕು ಎಂದು ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಪರವಾಗಿ ಮುಫತ್ತಿಸ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.