×
Ad

ಕಾಪುವಿನಲ್ಲಿ ಜನತಾ ಜಲಧಾರೆ ಯಾತ್ರೆ

Update: 2022-04-18 17:40 IST

ಕಾಪು : ಸಮರ್ಪಕ ನೀರಾವರಿ ಸೌಲಭ್ಯಗಳ ಕೊರತೆಯಿಂದ ರಾಜ್ಯದಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತಿದ್ದು, ಕೃಷಿ ಚಟುವಟಿಕೆಗಳೂ ಕುಂಠಿತಗೊಂಡಿದೆ. ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ದೇಶ ಮತ್ತು ರಾಜ್ಯವನ್ನು ಆಳುತ್ತಿರುವ ಪ್ರಮುಖ ರಾಷ್ಟ್ರೀಯ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಹೇಳಿದರು.

ಅವರು ಸೋಮವಾರ ಜಾತ್ಯಾತೀತ ಜನತಾದಳ ನೇತೃತ್ವದಲ್ಲಿ ಜಲ ಶ್ಯಾಮಲದಿಂದ ಸಸ್ಯ ಶ್ಯಾಮಲ ಸಮೃದ್ಧ ಕರ್ನಾಟಕ ನಿರ್ಮಾಣ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡ ಜನತಾ ಜಲಧಾರೆ ಯಾತ್ರೆ ಕಾಪುವಿಗೆ ತಲುಪಿದ್ದು, ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಕಾಪು ಕ್ಷೇತ್ರದ ಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು. 

ಜನರ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲದೇ ಸಮಸ್ಯೆಗಳನ್ನು ಆಲಿಸಲೂ ಕೂಡಾ ಎರಡೂ ಪಕ್ಷಗಳು ಸಮಯ ನೀಡುತ್ತಿಲ್ಲ. ಎರಡೂ ಪಕ್ಷಗಳಿಗೆ ಪರ್ಯಾಯವಾಗಿ ಜೆಡಿಎಸ್ ಬೆಳೆಯುತ್ತಿದ್ದು, ಜನರು ಕೂಡಾ ಪೂರಕವಾಗಿ ಬೆಂಬಲಿಸುತ್ತಿದ್ದಾರೆ. ಆ ಮೂಲಕ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗು ವುದು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಜೆಡಿಎಸ್ ಪಕ್ಷದ ವತಿಯಿಂದ ಜನತಾ ಜಲಧಾರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನತಾ ಜಲಧಾರೆ ಯಾತ್ರೆಗೆ ಉಡುಪಿ ಜಿಲ್ಲೆಯಲ್ಲೂ ಪೂರಕ ಬೆಂಬಲ ವ್ಯಕ್ತವಾಗಿದೆ ಎಂದರು.

ಕಾಪು ಕ್ಷೇತ್ರ ಸಂಚಾರ ಕಾರ್ಯಕ್ರಮಕ್ಕೆ ಕಾಪುವಿನ ಶ್ರೀ ಜನಾರ್ಧನ ದೇವಸ್ಥಾನದ ವಠಾರದಲ್ಲಿ  ಕಾರ್ಯಕರ್ತ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು ಅವರು ಚಾಲನೆ ನೀಡಿದರು. ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ವಾಸುದೇವ ರಾವ್, ಜೆಡಿಎಸ್ ಕಾಪು ಕ್ಷೇತ್ರಾಧ್ಯಕ್ಷ ಭರತ್ ಕುಮಾರ್ ಶೆಟ್ಟಿ, ಕಾಪು ಪುರಸಭೆ ಸದಸ್ಯ ಉಮೇಶ್ ಕರ್ಕೇರ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಜಯ್ ಕುಮಾರ್, ಮಹಿಳಾ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷೆ ಪೂರ್ಣಿಮಾ ನಾಯಕ್, ಪಕ್ಷದ ಮುಖಂಡರಾದ , ಸುಧಾಕರ ಶೆಟ್ಟಿ ಹೆಜಮಾಡಿ, ಸುಧಾಕರ ಶೆಟ್ಟಿ, ದೇವರಾಜ್ ತೊಟ್ಟಂ, ಎಂ.ಟಿ. ವೆಂಕಟೇಶ್, ಉದಯ ಹೆಗ್ಡೆ, ಅಬ್ದುಲ್ ರಜಾಕ್, ಬಿ.ಕೆ. ಮುಹಮ್ಮದ್, ಶ್ರೀಕಾಂತ್ ಪೂಜಾರಿ, ಇಬ್ರಾಹಿಂ ತವಕ್ಕಲ್, ರಫೀಕ್ ಉಚ್ಚಿಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News