×
Ad

ನವಾಬ್ ಮಲಿಕ್ ಕಸ್ಟಡಿ ವಿಸ್ತರಣೆ

Update: 2022-04-18 23:41 IST

ಹೊಸದಿಲ್ಲಿ, ಎ. 18: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ನ್ಯಾಯಾಂಗ ಬಂಧನವನ್ನು ವಿಶೇಷ ನ್ಯಾಯಾಲಯ ಸೋಮವಾರ ಎಪ್ರಿಲ್ 22ರ ವರೆಗೆ ವಿಸ್ತರಿಸಿದೆ. ನವಾಬ್ ಮಲಿಕ್ ಅವರು ಅನಾರೋಗ್ಯದ ಬಗ್ಗೆ ತಿಳಿಸಿದರೂ ನ್ಯಾಯಾಲಯ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ನಿಯೋಜಿತರಾಗಿರುವ ವಿಶೇಷ ನ್ಯಾಯಮೂರ್ತಿ ಆರ್.ಎನ್ ರೋಕಡೆ ಅವರ ಮುಂದೆ ಮಲಿಕ್ ಅವರನ್ನು ಹಾಜರುಪಡಿಸಲಾಯಿತು.

ಕಟಕಟೆ ಪ್ರವೇಶಿಸಿದ ಎನ್ಸಿಪಿ ನಾಯಕ ನವಾಬ್ ಮಲಿಕ್, ಮೂತ್ರ ಪಿಂಡದ ತೊಂದರೆಯಿಂದ ಅಸ್ವಸ್ಥನಾಗಿದ್ದೇನೆ. ಕಾಲುಗಳಲ್ಲಿ ಊತ ಕಂಡು ಬಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ತಾನು ಕಾಲು ನೋವಿನ ಬಗ್ಗೆ ಕಾರಾಗೃಹದ ಅಧಿಕಾರಿಗಳಿಗೆ ತಿಳಿಸಿದರೂ ಅವರು ಕೇವಲ ನೋವು ನಿವಾರಕ ಮಾತ್ರೆಗಳನ್ನು ಮಾತ್ರ ನೀಡಿದರು ಎಂದು ಮಲಿಕ್ ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News