ಅಪ್ರೆಂಟಿಶಿಪ್ ತರಬೇತಿ: ಅರ್ಜಿ ಆಹ್ವಾನ
Update: 2022-04-19 19:24 IST
ಉಡುಪಿ : ಬೆಂಗಳೂರು ಹಿಂದೂಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್ ತರಬೇತಿ ಸಂಸ್ಥೆ ವತಿಯಿಂದ, ಸಿಎನ್‌ಸಿ ಪ್ರೋಗ್ರಾಮರ್ ಕಮ್ ಆಪರೇಟರ್, ಎಲೆಕ್ಟ್ರಿಯನ್, ವೆಲ್ಡರ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ಟ್ರೇಡ್ ಹುದ್ದೆಗಳಿಗೆ ಒಂದು ವರ್ಷದ ಅಪ್ರೆಂಟಿಶಿಪ್ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಿಸಲಾಗಿದೆ.
ಎಸೆಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ. 60 ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳು ಮತ್ತು ಶೇ. 50 ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಎಸ್‌ಸಿ, ಎಸ್‌ಟಿ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳು ಎ.28ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ನಿಮಯ ಕಛೇರಿ, ಉಡುಪಿ ಮೊ.ನಂ: ೯೯೪೫೮೫೬೬೭೦, ೮೧೯೭೪೪೦೧೫೫ಅನ್ನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.