ಬೆಳ್ತಂಗಡಿ : ಹೆಬ್ಬಾವನ್ನು ನುಂಗಿದ ಕಾಳಿಂಗ ಸರ್ಪ !
ಬೆಳ್ತಂಗಡಿ : ಕಾಳಿಂಗ ಸರ್ಪವೊಂದು ಹೆಬ್ಬಾವನ್ನು ನುಂಗಿದ ಘಟನೆ ಪಿಲ್ಯದಲ್ಲಿ ಇಂದು ಸಂಜೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಪಿಲ್ಯದ ಸಾರ್ವಜನಿಕ ಸ್ಥಳದಲ್ಲಿ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಹಾವು ಸುಮಾರು 9 ಅಡಿ ಉದ್ದದ ಹೆಬ್ಬಾವನ್ನು ನುಂಗಿದ್ದು ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಈ ಬಗ್ಗೆ ವೇಣೂರು ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಸುರೇಶ್ ಗೌಡರಿಗೆ ಸ್ಥಳೀಯರು ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದಾಗ ಬೃಹತ್ ಹಾವು ಅಗಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಊರಗ ತಜ್ಞ ಬೆಳ್ತಂಗಡಿಯ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಲಾಯಿತು.
ಹೆಬ್ಬಾವನ್ನು ನುಂಗಿದ ಕಾಳಿಂಗ ಸರ್ಪ ನಂತರ ಹೆಬ್ಬಾವನ್ನು ತನ್ನ ಹೊಟ್ಟೆಯಿಂದ ಹೊರಹಾಕಿದ್ದು, ನಂತರ ಕಾಳಿಂಗ ಸರ್ಪವನ್ನು ಸ್ನೇಕ್ ಅಶೋಕ್ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಕಾಳಿಂಗ ಸರ್ಪದ ದಾಳಿಗೆ ತುತ್ತಾದ ಹೆಬ್ಬಾವು ಪ್ರಾಣವನ್ನು ಬಿಟ್ಟಿದ್ದು ಅರಣ್ಯ ಇಲಾಖೆಯವರು ಮಣ್ಣು ಮಾಡಿದ್ದಾರೆ.