×
Ad

ಎಂಜಿಎಂ ಕಾಲೇಜಿಗೆ ಮೂರು ರ‍್ಯಾಂಕ್

Update: 2022-04-20 19:32 IST
ವಿದ್ಯಾಶ್ರೀ ಕಲ್ಕೂರ, ರಿಚಾ ಉದಯ್, ರೊಲಿನ್ ಡಿಸೋಜ

ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯ ೨೦೨೦-೨೧ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಗಳಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಮೂರು ರ‍್ಯಾಂಕ್  ಗಳನ್ನು ಪಡೆದಿದ್ದಾರೆ.

ಬಿ.ಕಾಂನಲ್ಲಿ ಕಾಲೇಜಿನ ವಿದ್ಯಾಶ್ರೀ ಕಲ್ಕೂರ ಮೂರನೇ ರ‍್ಯಾಂಕ್ ಪಡೆದಿದ್ದರೆ, ಬಿಸಿಎ ವಿಭಾಗದಲ್ಲಿ ರಿಚಾ ಉದಯ್ ರಾಮನಾಥಕರ್ ಅವರು ಐದನೇ ಹಾಗೂ ರೊಲಿನ್ ಪ್ರಿಯಾ ಡಿಸೋಜ ಆರನೇ ರ‍್ಯಾಂಕ್ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್ ಎಸ್.ನಾಯ್ಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News