ಸುರತ್ಕಲ್: ಮಾರುಕಟ್ಟೆ ಎದುರಲ್ಲೇ ತ್ಯಾಜ್ಯ ಸುರಿಯುವುದಕ್ಕೆ ಬ್ರೇಕ್
Update: 2022-04-20 20:01 IST
ಮಂಗಳೂರು : ಇಲ್ಲಿನ ಮುಡಾ ಮಾರುಕಟ್ಟೆ ಬಳಿ ಆ್ಯಂಟನಿ ಸಂಸ್ಥೆ ತ್ಯಾಜ್ಯ ಸುರಿಯುತ್ತಿದ್ದ ಕುರಿತು ವಾರ್ತಾಭಾರತಿಯ ಸುದ್ದಿಗೆ ಮನಪಾ ಆಡಳಿ ಎಚ್ಚೆತ್ತು ಕೊಂಡು ತ್ಯಾಜ್ಯ ಸಂಗ್ರಹಕ್ಕೆ ಬ್ರೇಕ್ ಹಾಕಿದೆ.
"ಸುರತ್ಕಲ್ ಮಾರುಕಟ್ಟೆ ಎದುರಲ್ಲೇ ತ್ಯಾಜ್ಯ ಸುರಿಯುತ್ತಿರುವ ಆಂಟನಿ ಸಂಸ್ಥೆ, ಮನಪಾದಿಂದ ನಿರ್ಲಕ್ಷ್ಯ, ಸ್ವಚ್ಛ ಭಾರತದ ಅಣಕ" ಎಂದು ಮಂಗಳೂರು ಮಹಾ ನಗರ ಪಾಲಿಕೆಯ ನಿರ್ಲಕ್ಷ್ಯವನ್ನು ವಾರ್ತಾಭಾರತಿ ಎ.20ರಂದು ಸುದ್ದಿ ಪ್ರಕಟಿಸಿತ್ತು.
ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಎಚ್ಚೆತ್ತು ಕೊಂಡ ಮನಪಾ ಅಧಿಕಾರಿಗಳು ಹಾಗೂ ತ್ಯಾಜ್ಯ ನಿರ್ವಹಣೆಯ ಗುತ್ತಿಗೆ ಪಡೆದಿರುವ ಆ್ಯಂಟನಿ ಸಂಸ್ಥೆ ಬುಧವಾರದಿಂದಲೇ ಮಾರುಕಟ್ಟೆಯ ಎದುರಲ್ಲೇ ತ್ಯಾಜ್ಯ ಸಂಗ್ರಹಿಸುತ್ತಿದ್ದ ಕಾಯಕಕ್ಕೆ ಪೂರ್ಣವಿರಾಮ ಹಾಕಿದೆ ಎಂದು ಸ್ಥಳೀಯರು, ಮಾರುಕಟ್ಟೆಯ ವರ್ತಕರು ವಾರ್ತಾಭಾರತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.