ಮ್ಯಾಪ್ಸ್ ಕಾಲೇಜಿಗೆ ಎರಡು ರ‍್ಯಾಂಕ್
Update: 2022-04-20 20:07 IST
ಮಂಗಳೂರು : ವಿಶ್ವವಿದ್ಯಾನಿಲಯ ನಡೆಸಿದ 2021-22ನೇ ಸಾಲಿನ ಪರೀಕ್ಷೆಯಲ್ಲಿ ಮ್ಯಾಪ್ಸ್ ಕಾಲೇಜಿನ ವಿದ್ಯಾರ್ಥಿನಿಗಳಾದ ಅನನ್ಯ ಜಿ (ಬಂಟ್ವಾಳದ ನ್ಯಾಯವಾದಿ ಮಹಾಲಿಂಗ ಭಟ್ ಜಿ. ಹಾಗೂ ವಿದ್ಯಾಲಕ್ಷ್ಮಿ ಪಿ.ಬಿ ಅವರ ಪುತ್ರಿ) ಇವರು ಬಿ.ಕಾಂ ಪರೀಕ್ಷೆಯಲ್ಲಿ 2ನೇ ರ‍್ಯಾಂಕ್ ಹಾಗೂ ಸೋನಾ ಎಂ ಟಿ (ಕೇರಳದ ವಯನಾಡಿನ ತಂಕಚನ್ ಮತ್ತು ಲವ್ಲಿ ಅವರ ಪುತ್ರಿ) ಬಿ.ಎಎಸ್‍ಎಲ್‍ಪಿ ಪದವಿ ಪರೀಕ್ಷೆಯಲ್ಲಿ 3ನೇ ರ‍್ಯಾಂಕ್ ಗಳಿಸಿದ್ದಾರೆ.