×
Ad

ಉಳ್ಳಾಲ: ಸೌಹಾರ್ದ ಇಫ್ತಾರ್ ಕೂಟ

Update: 2022-04-20 21:46 IST

ಉಳ್ಳಾಲ: ಸದ್ಭಾವನಾ ವೇದಿಕೆ ಉಳ್ಳಾಲ ಮತ್ತು ಪೊಸಕುರಲ್ ಬಳಗ ಇದರ ಸಂಯುಕ್ತ ಆಶ್ರಯದಲ್ಲಿ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ ಕಲ್ಲಾಪು ಯುನಿಟಿ ಹಾಲ್ ನಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ  ಸೌಹಾರ್ದ ಸಂದೇಶ ನೀಡಿದ ಎಸಿಪಿ ದಿನಕರ್ ರವರು, ಸೌಹಾರ್ದ ತೆಯಿಂದ ಬಹಳಷ್ಟು ಸಮಸ್ಯೆ ಪರಿಹಾರ ಆಗುತ್ತದೆ. ಖರ್ಜೂರ ಮೂಲಕ ಉಪವಾಸ ಬಿಡಬಹುದು.ಆದರೆ ಅದರ ಮಹತ್ವ ಅರ್ಥ ಮಾಡಿಕೊಳ್ಳಬೇಕಾಗಿದೆ.ಉಪವಾಸ  ಎಲ್ಲರೂ ಒಂದೇ ರೀತಿ ಇದ್ದಾರೆ ಎಂದು ಅರ್ಥ ನೀಡುತ್ತದೆ.  ಧರ್ಮ ದ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿದರೆ ವಿಚಾರ ಅರ್ಥವಾಗುತ್ತದೆ ಎಂದು ಹೇಳಿದರು.
ಪೊಸಕುರಲ್ ನಿರ್ದೇಶಕ ವಿದ್ಯಾಧರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್  ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಞಿ , ಸಮೂಹ ಸಂಪನ್ಮೂಲ ವ್ಯಕ್ತಿ ಹರೀಶ್ ಕುಮಾರ್ ಜಿ.ಪಂ. ಮಾಜಿ ಸದಸ್ಯ ಪೌಲ್ ರಾಲ್ಫ್  ಡಿಕೋಸ್ಟ  ರಂಝಾನ್ ಸಂದೇಶ ನೀಡಿದರು.

ಸದ್ಭಾವನಾ ವೇದಿಕೆ ಗೌರವ ಅಧ್ಯಕ್ಷ ಸದಾನಂದ ಬಂಗೇರ ಉಪಸ್ಥಿತರಿದ್ದರು. ಇಸ್ಹಾಕ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ಡಿಸೋಜ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News