ಪಬ್ಲಿಕ್ ಪರೀಕ್ಷೆ; ಕುಂಪಲ ನೂರುಲ್ ಇಸ್ಲಾಂ ಮದ್ರಸಕ್ಕೆ ಶೇ.100 ಫಲಿತಾಂಶ
Update: 2022-04-20 23:28 IST
ಉಳ್ಳಾಲ: ಸಯ್ಯಿದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ ಅಧೀನದಲ್ಲಿ ನಡೆದಿರುವ 2021-22ರ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಕುಂಪಲ ನೂರುಲ್ ಇಸ್ಲಾಂ ಮದ್ರಸವು 100 ಶೇ ಫಲಿತಾಂಶ ಹೊಂದಿದ್ದು, ಟ್ರಸ್ಟ್ ಅಧೀನದಲ್ಲೇ ಅಗ್ರಸ್ಥಾನಿಯಾಗಿ ಕುಂಪಲದ 5ನೇ ತರಗತಿಯ ಶೈಖ್ ಮುಹಮ್ಮದ್ ಜಲಾಲ್ ಪ್ರಥಮ ಹಾಗೂ ರಜ್ವಾ ನಫೀಸ ದ್ವಿತೀಯ ಹಾಗೂ 7ನೇ ತರಗತಿಯ ಸಫಿಯತ್ ಶಿಮಾಝ್ ದ್ವಿತೀಯ ರ‍್ಯಾಂಕ್ ನೊಂದಿಗೆ ತೇರ್ಗಡೆಯಾಗಿದ್ದಾರೆ.
ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ಅಭಿನಂದನೆಗಳು ಎಂದು ಕುಂಪಲ ಮದ್ರಸ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.