ಮಂಗಳೂರು ವಿ.ವಿ.ಯಿಂದ ಹೇಮಾವತಿ ಹೆಗ್ಗಡೆ, ಹರಿಕೃಷ್ಣ ಪುನರೂರು, ದೇವದಾಸ್ ಕಾಪಿಕಾಡ್ ರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ

Update: 2022-04-21 11:33 GMT
ಹೇಮಾವತಿ ಹೆಗ್ಗಡೆ, ಹರಿಕೃಷ್ಣ ಪುನರೂರು, ದೇವದಾಸ್ ಕಾಪಿಕಾಡ್

ಮಂಗಳೂರು : ಮಂಗಳೂರು ವಿಶ್ವ ವಿದ್ಯಾಲಯದ 40ನೆ ಘಟಿಕೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನ ವಿಕಾಸ ಯೋಜನೆಯ ಅಧ್ಯಕ್ಷೆ, ಸಮಾಜಸೇವಕಿ ಹೇಮಾವತಿ ವಿ ಹೆಗ್ಗಡೆ, ಕ.ಸಾ.ಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲಾವಿದ ದೇವದಾಸ್ ಕಾಪಿಕಾಡ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಮತ್ತು ಡಾ.ಶಿವಾನಂದ ನಾಯ್ಕ್ ಅವರಿಗೆ ವಿಜ್ಞಾನ (ಸಂಶೋಧನೆಗೆ ) ಡಾಕ್ಟರೇಟ್ ಪುರಸ್ಕಾರ ನೀಡಲಾಗುತ್ತಿದೆ ಎಂದು ವಿ.ವಿ.ಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಎ.23ರಂದು ನಡೆಯುವ ಘಟಿಕೋತ್ಸವದಲ್ಲಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಹ ಕುಲಾಧಿಪತಿ ಡಾ. ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ.

153 ಮಂದಿಗೆ ಪಿಎಚ್ ಡಿ ಪದವಿ, 52ಮಂದಿಗೆ ಚಿನ್ನದ ಪದಕ, 192 ವಿದ್ಯಾರ್ಥಿಗಳಿಗೆ ರ‍್ಯಾಂಕ್ ನೀಡಲಾಗುತ್ತದೆ ಎಂದು ಕುಲಪತಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪರಿಕ್ಷಾಂಗ ಕುಲಸಚಿವ ಎಲ್.ಧರ್ಮ, ವಿ.ವಿ.ಕಾಲೇಜ್ ಪ್ರಾಂಶುಪಾಲರಾದ ಡಾ.ಅನಸೂಯ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News