ಮಂಗಳೂರು: ಫೋರಂ ಫಿಝಾ ಮಾಲ್‍ನಲ್ಲಿ ಫುಡ್ ಹಂಗಾಮ
ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಫೋರಂ ಫಿಝಾ ಮಾಲ್‍ನಲ್ಲಿ ಏಪ್ರಿಲ್ ತಿಂಗಳಲ್ಲಿ ವಿಶೇಷವಾದ ರುಚಿಕರ ಹಬ್ಬದೂಟವನ್ನು ಸವಿಯುವ ಅವಕಾಶವನ್ನು ನೀಡಲಾಗುತ್ತಿದೆ.
ರಮಝಾನ್ ಪ್ರಯುಕ್ತ ಫೋರಂ ಫಿಝಾ ಮಾಲ್ ಗ್ರಾಹಕರಿಗೆ ಹಲವು ಆಫರ್ ಗಳನ್ನು ನೀಡುತ್ತಿದೆ. ಮಂಗಳೂರಿನ ಹೆಸರುವಾಸಿ ಹೋಟೆಲ್‍ಗಳ ಕೌಂಟರ್ ಗಳು ಈ ಹಬ್ಬದೂಟದಲ್ಲಿ ಗ್ರಾಹಕರಿಗೆ ವಿಶೇಷ ರೀತಿಯ ರುಚಿಕರ ಹಾಗೂ ಶುದ್ಧ ಆಹಾರ ನೀಡಲಿವೆ.
ಬಿರಿಯಾನಿ, ಟಿಕ್ಕ, ತಂದೂರಿ, ಐಸ್‍ಕ್ರೀಂ, ಸಿಹಿತಿಂಡಿಗಳು... ಹೀಗೆ ಬಗೆ-ಬಗೆಯ ರುಚಿಕರ ಭಕ್ಷ್ಯಗಳು ಒಂದೇ ಸೂರಿನಡಿ ಇರಲಿವೆ. ಕೊರೋನ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದ ಫೋರಂ ಫಿಝಾ ಮಾಲ್‍ನಲ್ಲಿ ಜಗತ್ ಪ್ರಸಿದ್ಧ ಬ್ರಾಂಡ್‍ಗಳ ಜೊತೆಗೆ ವಿಶಾಲವಾದ ಪಾರ್ಕಿಂಗ್ ಹಾಗೂ ಹಲವು ಗ್ರಾಹಕಸ್ನೇಹಿ ಸೌಕರ್ಯಗಳಿವೆ. ಇದಕ್ಕಾಗಿ ಜನರು ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ. ವಿದ್ಯುತ್ ಚಾಲಿತ ವಾಹನಗಳಿಗೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಇಲ್ಲಿಯ ವಿಶೇಷ ಸೌಲಭ್ಯವಾಗಿದೆ. ಒಂದು ಪರಿಪೂರ್ಣ ಕುಟುಂಬಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳು ಈ ಮಾಲ್‍ನಲ್ಲಿ ಲಭ್ಯವಿದೆ.