×
Ad

ದ.ಕ. ಜಿಲ್ಲೆಯ ಹಲವೆಡೆ ಸಾಧಾರಣ ಮಳೆ

Update: 2022-04-22 20:32 IST

ಮಂಗಳೂರು : ದ.ಕ. ಜಿಲ್ಲೆಯ ಗ್ರಾಮೀಣ ಭಾಗ ಸಹಿತ ಹಲವು ಕಡೆ ಶುಕ್ರವಾರ ಸಂಜೆ ಗುಡುಗು-ಮಿಂಚು ಸಹಿತ ಸಾಧಾರಣ  ಮಳೆಯಾಗಿದೆ.

ಕೆಲವು ದಿನಗಳಿಂದ ಕಡಿಮೆಯಾಗಿದ್ದ ಮಳೆಯು ಶುಕ್ರವಾರ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಸಾಧಾರಣ ಸುರಿದಿದೆ. ಶುಕ್ರವಾರ ಹಗಲು ವೇಳೆ ಉರಿಬಿಸಿಲು ಎಂದಿಗಿಂತ ತುಸು ಹೆಚ್ಚಿತ್ತು. ಸಂಜೆಯಾಗತ್ತಲೇ ಹೆಚ್ಚಿನ ಕಡೆಗಳಲ್ಲಿ ಮಳೆಯಾಗಿದೆ.

ಸಳ್ಯದ ದೇವಚ್ಚಳ್ಳದಲ್ಲಿ 43 ಮಿ.ಮೀ., ಜಾಲ್ಸೂರು 37.5,  ಕಲ್ಮಡ್ಕ 22.5, ಮಂಡೆಕೋಲು 19, ಬಾಳಿಲ 17.5, ಕಡಬದಲ್ಲಿ 12, ಬಿಳಿನೆಲೆ 29 ಮಿ.ಮೀ. ಸಹಿತ ಬೆಳ್ತಂಗಡಿಯ ಮುಂಡಾಜೆ, ನಡ, ಬಳಂಜ, ರಾಯಿ, ಪುತ್ತೂರಿನ ಅರಿಯಡ್ಕ, ಮಂಗಳೂರಿನ ಗುರುಪುರ ಮತ್ತಿತರ ಕಡೆಗಳಲ್ಲಿ ಮಳೆ ಸುರಿದಿದೆ. ವಿಟ್ಲ, ಪೆರುವಾಜೆ ಭಾಗದಲ್ಲೂ ಗುಡುಗು ಸಹಿತ ಮಳೆಯಾಗಿದೆ. ಇದರಿಂದ ಬಿಸಿಲಿನ ಬೇಗೆ ದೂರವಾಗಿ ತುಸು ತಂಪಿನ ವಾತಾವರಣ ಉಂಟಾಯಿತು.

ಮಂಗಳೂರಿನಲ್ಲಿ ಗರಿಷ್ಠ 35.3 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 25.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಎರಡು ದಿನ ಕರಾವಳಿಯಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News