ಮಂಗಳೂರು ವಿವಿ ಫಲಿತಾಂಶ: ಸಂತ ಫಿಲೋಮಿನಾ ಕಾಲೇಜಿಗೆ 17 ರ‍್ಯಾಂಕ್
ಪುತ್ತೂರು : ಮಂಗಳೂರು ವಿಶ್ವ ವಿದ್ಯಾನಿಲಯವು 2021ರ ಅಕ್ಟೋಬರ್ /ನವೆಂಬರ್‍ನಲ್ಲಿ ನಡೆಸಿದ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಸಂತ ಫಿಲೋಮಿನಾ ಕಾಲೇಜು ಪದವಿ ವಿಭಾಗದಲ್ಲಿ ಆರು ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಹನ್ನೊಂದು ರ‍್ಯಾಂಕ್ ಸೇರಿದಂತೆ ಒಟ್ಟು17 ರ‍್ಯಾಂಕ್ ಪಡೆದು ಉತ್ತಮ ಸಾಧನೆ ತೋರಿದೆ.
ಕಂಪ್ಯೂಟರ್ ಸೈನ್ಸ್ ಎಮ್‍ಎಸ್ಸಿಯಲ್ಲಿ ಝೈನಬತ್ ರಂಸೀನಾ ಪ್ರಥಮ ರ‍್ಯಾಂಕ್, ಭೌತಶಾಸ್ತ್ರ ಎಮ್‍ಎಸ್ಸಿಯಲ್ಲಿ ಸುಶ್ಮಿತಾ ಕೆ ಪ್ರಥಮ ರ‍್ಯಾಂಕ್, ಎಂಎಸ್‍ಡಬ್ಲ್ಯೂನಲ್ಲಿ ಸಾರಮ್ಮ ಟಿ.ಜೆ ದ್ವಿತೀಯ ರ‍್ಯಾಂಕ್ ಗಳಿಸಿದ್ದಾರೆ.
ಬಿಎಸ್ಸಿಯಲ್ಲಿ ಅನು ಡಿ ನಾಲ್ಕನೇ ರ‍್ಯಾಂಕ್, ರೆನಿಲ್ಡಾ ಜೋಯ್ಸ್ ಮಾರ್ಟಿಸ್ ಒಂಬತ್ತನೇ ಮತ್ತು ರಮ್ಯಶ್ರೀ ಹತ್ತನೇ ರ‍್ಯಾಂಕ್ ಪಡೆದಿದ್ದಾರೆ. ಬಿಬಿಎ ವಿಭಾಗದಲ್ಲಿ ರಾಶಿಯಾ ರೈ ಐದನೇ ರ‍್ಯಾಂಕ್ ಮತ್ತು ಶ್ರೇಯಾಕೆ ಎಸ್ ಏಳನೇಯ ರ‍್ಯಾಂಕ್ ಗಳಿಸಿದ್ದಾರೆ. ಬಿಎ ವಿಭಾಗದಲ್ಲಿ ಚೇತನಾ ಎನ್ ಆರನೇ ರ‍್ಯಾಂಕ್ ಗಳಿಸಿದ್ದಾರೆ.
ಎಂಕಾಂ ವಿಭಾಗದಲ್ಲಿ ಒಟ್ಟು ಎಂಟು ರ‍್ಯಾಂಕ್ ಪಡೆದುಕೊಂಡಿದ್ದು, ನಿರಿಷ್ಮಾ ಎನ್ ಸುವರ್ಣ ನಾಲ್ಕನೇ , ಯಶಸ್ವಿನಿ ಮತ್ತು ರಕ್ಷಾ ಎಸ್.ವಿ ಐದನೇ, ನಿವಿನ್ ಕೊರೆಯಾ ಆರನೇ, ಭವ್ಯಶ್ರೀ ಮತ್ತು ಶ್ರಾವ್ಯ ಎನ್.ಎಸ್ ಏಳನೇ, ರಮ್ಯ ಎಮ್ ಒಂಬತ್ತನೇ ಮತ್ತು ಸ್ವಾತಿ ಎಮ್ ಹತ್ತನೇ ರ‍್ಯಾಂಕ್ ಪಡೆದಿದ್ದಾರೆ.