ಮಿಯಾರು: ಉಚಿತ ಆರೋಗ್ಯ ತಪಾಸಣೆ ಶಿಬಿರ
ಕಾರ್ಕಳ: ಬಡತನದಲ್ಲೂ ಕಠಿಣ ಶ್ರಮ ಸಾಧನೆಯಿಂದ ಹಂತಹಂತವಾಗಿ ಬೆಳೆದ ಡಾ ಶಿವರಾಮ ಕೃಷ್ಣ ಭಂಡಾರಿಯವರು ಸಮಾಜದ ಕಷ್ಟಕ್ಕೂ ಸ್ಪಂದಿಸಿದವರು. ಜನಪ್ರೀಯತೆ ಮೂಲಕ ಸಮಾಜ ಸೇವೆಯಲ್ಲಿ ತೊಗಿಸಿಕೊಂಡ ಅವರಿಂದ ಬಡವರ ಕಣ್ಣೊರೆಸುವ ಅಸಂಖ್ಯಾತ ಕಾರ್ಯಗಳು ಆಗಿದೆ ಎಂದು ಭಂಡಾರಿ ಮಹಾಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಹೇಳಿದರು.
ಕಾರ್ಕಳ ಮಿಯಾರು ಸೈಂಟ್ ಡೊಮೆನಿಕ್ ಚರ್ಚ್ ಸಭಾಂಗಣದಲ್ಲಿ ಗುಲಾಬಿ ಕೃಷ್ಣ ಡಾರಿ ಚಾರಿಟೇಬಲ ಟ್ರಸ್ಟ್ ಹಾಗೂ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇದರ ಸಹಯೋಗದಲ್ಲಿ ಡಾ ಶಿವರಾಮ ಕೃಷ್ಣ ಭಂಡಾರಿ ಇದರ ಷಷ್ಠ್ಯಪೂರ್ತಿ ಸಂಭ್ರಮ ನಿಮಿತ್ತ ಎ.ಜೆ ಹಾಸ್ಪಿಟಲ್ ಆಪ್ ಮೆಡಿಕಲ್ ಸೈನ್‌ಸ್ ಮಂಗಳೂರು ಸಹಕಾರಲ್ಲಿ ಎ.23ರಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಿಯಾರು ಸೈಂಟ್ ಡೊಮೆನಿಕ್ ಚರ್ಚ್ ಧರ್ಮಗುರು ರೆ ಪಾ ಪಾವ್ಲ್ ರೆಗೋ ಮಾತನಾಡಿ, ಜಾತಿ, ಮತ, ‘ರ್ಮಗಳ ಬೇಧ ಬಾವವಿಲ್ಲದೆ ನಡೆಯುವ ಆರೋಗ್ಯ ಶಿಬಿರ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಗುಲಾಬಿ ಕೃಷ್ಭ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಡಾ ಶಿವರಾಮ ಕೃಷ್ಣ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ , ಮಿಯಾರು ಗ್ರಾಾ.ಪಂ ಅಧ್ಯಕ್ಷ ಗಿರೀಶ್ ಅಮೀನ್, ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ, ಎಜೆ ಶೆಟ್ಟಿ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ ಪ್ರಣಮ್ಯ ಜೈನ್, ಡಾ ಮಿಯಾರು ಬ್ರಹ್ಮಶ್ರೀ ಮೊಗೇರ ವ್ಯವಸ್ಥಾಾಪನ ಸಮಿತಿ ಅಧ್ಯಕ್ಷ ದಿನೇಶ್ ಮೊಗೇರ, ವಿಶ್ವಸ್ಥ ಸದಸ್ಯೆಯರಾದ ಅನುಶ್ರೀ ಭಂಡಾರಿ, ಶ್ವೇತಾ ಭಂಡಾರಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮೊಹಮ್ಮದ್ ಶರೀಫ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಸಲಹೆಗಾರ ರೋನ್ಸ್ ಬಂಟ್ವಾಳ್ ಪ್ರಸ್ತಾವನೆಗೈದರು. ಈ ಸಂದರ್ಭದಲ್ಲಿ ಡಾ ಶಿವರಾಮ ಕೃಷ್ಣ ದಂಪತಿಗಳನ್ನು ಸಮ್ಮಾನಿಸಿ, ಗೌರವಿಸಲಾಯಿತು. ತಜ್ಞ ವೈದ್ಯ ಡಾ ಲೊಕೇಶ್ ರಾವ್ ಬಿ.ಕೆ ಸಹಿತ ವಿವಿಧ ಕ್ಷೇತ್ರಗಳ ಸಾಧಕ ರಾದ ಲೋನಾ ಪೀಟರ್ ನೊರೊನ್ಹಾ, ಬೆನೆಡಿಕ್ಟ್ ಬಿ.ರೆಬೆಲ್ಲೋ, ಡಾ ಶೇಖರ್ ಅಜೆಕಾರ್ ಸಹಿತ ಹಲವು ಮಂದಿ ಸಾಧಕರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಚೇತನ್ ಶೆಟ್ಟಿ ನಿರೂಪಿಸಿದರು. ಎ.ಜೆ ಹಾಸ್ಪಿಟಲ್ ವೈದ್ಯಕೀಯ ಸಿಬ್ಬಂದಿಗಳು ನಾಗರಿಕರ ಆರೋಗ್ಯ ತಪಾಸಣೆ ನಡೆಸಿದರು.