×
Ad

ಆನ್‌ಲೆನ್‌ನಲ್ಲಿ ಶಿಕ್ಷಣದ ಹಕ್ಕು ಏನಾಗಲಿದೆ?

Update: 2022-04-26 11:45 IST

ಕೋವಿಡ್ ಸಾಂಕ್ರಾಮಿಕವು ಹೇಗೆ ಶಾಲೆಗಳ ಮುಚ್ಚುಗಡೆ ಮತ್ತು ಬೋಧನೆಗೆ ಅಡ್ಡಿಯ ಮೂಲಕ ಶಿಕ್ಷಣವನ್ನು ಪಡೆಯುವಲ್ಲಿ ಅಸ್ತಿತ್ವದಲ್ಲಿದ್ದ ಅಸಮಾನತೆಗಳನ್ನು ಹೆಚ್ಚಿಸಿರುವುದು ಮಾತ್ರವಲ್ಲ, ಕಲಿಕೆಯ ಅನುಭವದ ಸ್ವರೂಪವನ್ನೂ ಬದಲಿಸಿರುವುದನ್ನು ನಾವು ನೋಡಿದ್ದೇವೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ವಿಶ್ವಾದ್ಯಂತ ಶೇ.87ರಷ್ಟು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯುಂಟಾಗಿದೆ ಎಂದು 2020,ಮಾರ್ಚ್‌ನಲ್ಲಿ ಯುನೆಸ್ಕೋ ವರದಿ ಮಾಡಿತ್ತು. ಮೇ 2021ರಲ್ಲಿ ಹ್ಯೂಮನ್ ರೈಟ್ಸ್ ವಾಚ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಮುಖವಾಗಿ ಬಿಂಬಿಸಲ್ಪಟ್ಟಿದ್ದ ಮತ್ತು ಉಲ್ಬಣಗೊಂಡಿದ್ದ ಶಿಕ್ಷಣ ವ್ಯವಸ್ಥೆಗಳಲ್ಲಿನ ದೀರ್ಘಕಾಲೀನ ಅಸಮಾನತೆಗಳನ್ನು ನಿವಾರಿಸುವುದಕ್ಕೆ ತೀವ್ರ ಗಮನವನ್ನು ನೀಡುವಂತೆ ಮತ್ತು ಸಂಪನ್ಮೂಲಗಳನ್ನು ಒದಗಿಸುವಂತೆ ಸರಕಾರಗಳಿಗೆ ಕರೆ ನೀಡಿತ್ತು.

ಇದರೊಂದಿಗೆ ಸಾಂಕ್ರಾಮಿಕದ ಸಮಯದಲ್ಲಿ ಜಾರಿಗೆ ತರಲಾದ ಆನ್‌ಲೈನ್ ಕಲಿಕಾ ವ್ಯವಸ್ಥೆಯು ಸರಿಯಾಗಿ ಸಿದ್ಧಗೊಂಡಿರದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕವನ್ನು ಸಂಪೂರ್ಣ ಹೊಸಮಟ್ಟಕ್ಕೊಯ್ದಿತ್ತು ಮತ್ತು ಖಾಸಗಿತನದ ಉಲ್ಲಂಘನೆಗಳನ್ನು ಉಲ್ಬಣಗೊಳಿಸಿತ್ತು. ಡಿಜಿಟಲೀಕರಿಸಿದ ಶಿಕ್ಷಣ ಪ್ರಕ್ರಿಯೆಯು ಎಷ್ಟರ ಮಟ್ಟಿಗೆ ಪರಿಣಾಮಕಾರಿತ್ವವನ್ನು ಹೊಂದಿದೆ ಎಂಬ ಪ್ರಶ್ನೆಗೆ ಇನ್ನೂ ತೃಪ್ತಿಕರ ಉತ್ತರ ದೊರಕಿಲ್ಲ.

ಸಂಸ್ಥೆಗಳನ್ನು ಬಿಡಿ,ಬೋಧಕರು ಮತ್ತು ವಿದ್ಯಾರ್ಥಿಗಳು ಅರಿವನ್ನು ಹೆಚ್ಚಿಸಿಕೊಳ್ಳುವ ಮತ್ತು ಓದಿನಲ್ಲಿ ತಲ್ಲೀನರಾಗುವ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಭೌತಿಕ ತರಗತಿಗಳಲ್ಲಿಯ ಪ್ರಕ್ರಿಯೆಗಳು ವರ್ಚುವಲ್ ವಿಧಾನಕ್ಕೆ ಸರಾಗವಾಗಿ ಬದಲಾಗುತ್ತವೆ ಎಂದು ಭಾವಿಸಿದ್ದಾರೆ. ಪ್ರಾಯಶಃ ವಿವಿಧ ವೇದಿಕೆಗಳು ಮತ್ತು ರೂಪಗಳಲ್ಲಿ ಹೇಳಲಾಗಿರುವ ಶಿಕ್ಷಣದ ಹಕ್ಕು ತರಗತಿಯಿಂದ ಡಿಜಿಟಲ್ ಸ್ಪೇಸ್‌ಗೆ ತೀವ್ರವಾಗಿ ಬದಲಾಗಿದ್ದರೂ ಹೇಗೆ ಈ ಶಿಕ್ಷಣದ ಹಕ್ಕು ಮರುಮಾಪನಾಂಕ ನಿರ್ಣಯಕ್ಕೊಳಪಡುವ ಅಗತ್ಯವಿದೆ ಎನ್ನುವುದನ್ನು ನಾವು ಪರಿಶೀಲಿಸಬೇಕಿದೆ.

ಕಾಲೇಜುಗಳು ಮತ್ತು ವಿವಿಗಳಲ್ಲಿ ಭೌತಿಕ ತರಗತಿಗಳು ಕ್ರಮೇಣ ಕಡಿಮೆಯಾಗುತ್ತಿವೆ. ಕಾಲೇಜುಗಳು ಮತ್ತು ವಿವಿಗಳಲ್ಲಿ ಆನ್‌ಲೈನ್ ಕೋರ್ಸ್‌ಗಳಿಗೆ ಅನುಮತಿ ನೀಡಿರುವುದು ಇದನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ಈ ಆನ್‌ಲೈನ್ ಕೋರ್ಸ್‌ಗಳನ್ನು ಹಲವರು ಸಂದೇಹದಿಂದಲೇ ಸ್ವಾಗತಿಸಿದ್ದಾರೆ.

ಆನ್‌ಲೈನ್ ಕಲಿಕೆಯನ್ನು ಸಾಧ್ಯವಾಗಿಸಲು ಮಕ್ಕಳಿಗಾಗಿ ಅದಕ್ಕಾಗಿಯೇ ಮೀಸಲಾದ ಸ್ಥಳಗಳನ್ನು ಒದಗಿಸಲಾಗಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವುದು ಹೇಗೆ? ಎಷ್ಟು ಮಕ್ಕಳು ಆನ್‌ಲೈನ್ ಕಲಿಕೆಯನ್ನು ಸಾಧ್ಯವಾಗಿಸುವ ಟೇಬಲ್,ಕುರ್ಚಿ,ಸಾಧನ ಮತ್ತು ಪ್ರಶಾಂತ ವಾತಾವರಣದೊಂದಿಗಿನ ಭೌತಿಕ ಸ್ಥಳದ ಅನುಕೂಲತೆಯನ್ನು ಹೊಂದಿರುತ್ತಾರೆ? 2021ರಲ್ಲಿ ಸರ್ವೋಚ್ಚ ನ್ಯಾಯಾಲಯವು ಸಹ ಡಿಜಿಟಲ್ ವಿಭಜನೆಯನ್ನು ಗಮನಕ್ಕೆ ತೆಗೆದುಕೊಂಡಿತ್ತು ಮತ್ತು ವಿಶೇಷವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಮಕ್ಕಳು ಆನ್‌ಲೈನ್ ವಿಧಾನದಲ್ಲಿಯೂ ಶಿಕ್ಷಣದ ಹಕ್ಕು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿತ್ತು. ವಂಚಿತ ಮಕ್ಕಳು ಆನ್‌ಲೈನ್ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ಅದು ಹೇಳಿತ್ತು.

ಆನ್‌ಲೈನ್ ಶಿಕ್ಷಣದಲ್ಲಿ ಯೂಸರ್-ಡಾಟಾದ ಮೇಲೆ ನಿಗಾದಿಂದ ಹಲವಾರು ರೀತಿಯಲ್ಲಿ ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತದೆ ಎನ್ನುವುದು ಪ್ರಮುಖ ಕಳವಳವಾಗಿದೆ.

ಪೂರಕ ವಾತಾವರಣವಿದ್ದರೆ ಮಾತ್ರ ಹಕ್ಕುಗಳು ಲಭ್ಯವಾಗುತ್ತವೆ. ವ್ಯಾಖ್ಯಾನಕಾರರು ಶೈಕ್ಷಣಿಕ ಸ್ವಾತಂತ್ರದೊಂದಿಗೆ ಶೈಕ್ಷಣಿಕ ಹಕ್ಕುಗಳನ್ನು ಸಮನ್ವಯಗೊಳಿಸಿ ಮುಕ್ತ ಕಲಿಕಾ ವೇದಿಕೆಗಳು ಸಮಾನವಾದ ಕಲಿಕೆ ಮತ್ತು ಬೋಧನೆಗೆ ಪೂರಕವಾಗಿವೆ ಎಂದು ಪ್ರಸ್ತಾವಿಸಿದ್ದಾರೆ. ಆನ್‌ಲೈನ್ ಪೋರ್ಟಲ್‌ಗಳ ಪ್ರಕರಣದಲ್ಲಿ ವೌಖಿಕ,ದೃಶ್ಯ,ಲಿಖಿತ ಮತ್ತು ಈಗ ವರ್ಚುವಲ್ ಇವುಗಳು ವಿಲೀನಗೊಳ್ಳುವ ಸಾಮರ್ಥ್ಯಗಳ ಸಂಪೂರ್ಣ ಸಂಗ್ರಹದೊಂದಿಗೆ ಮಾತ್ರ ಶಿಕ್ಷಣದ ಹಕ್ಕನ್ನು ಚಲಾಯಿಸಬಹುದು.

ಶಿಕ್ಷಣವು ನಿಜವಾಗಿಯೂ ಒಂದು ಹಕ್ಕು ಆಗಿದ್ದರೆ ಆನ್‌ಲೈನ್ ಮತ್ತು ಬೋಧನೆ-ಕಲಿಕೆಯ ಸಂಯೋಜಿತ ವಿಧಾನಗಳಿಗೆ ಬದಲಾವಣೆಯು ತರಬೇತಿ,ಬೋಧನಾ ಸಾಮಗ್ರಿಗಳ ಸ್ವರೂಪ ಮತ್ತು ಕೋರ್ಸ್ ಲಭ್ಯತೆಯ ಮೂಲಕ ಕೌಶಲ್ಯಗಳ ಪುನಃಶ್ಚೇತನವನ್ನು ಬಯಸುತ್ತದೆ. ಕಲಿಕಾರ್ಥಿಗಳಿಗೆ ವರ್ಚುವಲ್‌ನಲ್ಲಿ ಅವರ ಹಕ್ಕುಗಳ ಕುರಿತು ಪ್ರಾಥಮಿಕ ತರಬೇತಿ ಮತ್ತು ಶಿಕ್ಷಣ ನೀಡದಿದ್ದರೆ ಆನ್‌ಲೈನ್ ಶಿಕ್ಷಣದ ಹಕ್ಕು ಕಾರ್ಯರೂಪಕ್ಕೆ ಬರುವುದಿಲ್ಲ.

ಕೃಪೆ:(thewire.in)

Writer - ಪ್ರಮೋದ್ ಕೆ.ನಾಯರ್

contributor

Editor - ಪ್ರಮೋದ್ ಕೆ.ನಾಯರ್

contributor

Similar News