×
Ad

‘ಉಡುಪಿ ನಗರಸಭಾ ಉಪಕಚೇರಿಗಳಲ್ಲೂ ಆಸ್ತಿ ತೆರಿಗೆ ಪಾವತಿಗೆ ಅವಕಾಶ‘

Update: 2022-04-26 19:29 IST

ಉಡುಪಿ : ಉಡುಪಿ ನಗರಸಭೆಯ ಅಸ್ತಿ ತೆರಿಗೆಯನ್ನು ಪಾವತಿ ಮಾಡಲು ಉಡುಪಿ ನಗರಸಭೆಗೇ ಬರಬೇಕಾಗಿಲ್ಲ, ತಮ್ಮ ತಮ್ಮ ವಾರ್ಡ್‌ಗಳ ಸಮೀಪದಲ್ಲಿರುವ ನಗರಸಭಾ ಉಪಕಛೇರಿಯಲ್ಲಿ ಅದನ್ನು ಬರೆಯಿಸಿಕೊಂಡು ಹತ್ತಿರದ ಬ್ಯಾಂಕ್‌ಗಳಲ್ಲಿ ತೆರಿಗೆ ಮೊತ್ತವನ್ನು ಪಾವತಿ ಮಾಡಲು ಅವಕಾಶವಿದೆ ಎಂದು ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತೆರಿಗೆ ಪಾವತಿಯ ಪ್ರಸ್ತುತ ಸಮಯದಲ್ಲಿ ಹೆಚ್ಚಿನ ಎಲ್ಲಾ ಸಾರ್ವಜನಿಕರು ನಗರಸಭೆಗೆ ಬಂದು ಮತ್ತು ಅಲ್ಲಿನ ಬ್ಯಾಂಕ್ ಶಾಖೆಯಲ್ಲಿ ಸರತಿ  ಸಾಲಿನಲ್ಲಿ ನಿಂತು ಗೊಂದಲ ಸೃಷ್ಟಿಯಾಗುವುದನ್ನು ತಪ್ಪಿಸಲು ಅಧ್ಯಕ್ಷರು ಈ ಮನವಿ ಮಾಡಿದ್ದಾರೆ. ಕೆನರಾ ಬ್ಯಾಂಕ್‌ನ ಪರ್ಕಳ, ಕೋರ್ಟ್ ರೋಡ್ ಉಡುಪಿ, ಮಲ್ಪೆ ಶಾಖೆಗಳು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಣಿಪಾಲ, ಉಡುಪಿ ಶಾಖೆಗಳಲ್ಲಿ, ಐಡಿಬಿಐ ಬ್ಯಾಂಕ್‌ನ ಉಡುಪಿ ಶಾಖೆ, ಪುತ್ತೂರಿನ ಬ್ಯಾಂಕ್ ಆಫ್ ಬರೋಡಾ ಶಾಖೆಗಳಲ್ಲಿ ಸಹ ತೆರಿಗೆ ಪಾವತಿ ಮಾಡಲು ಅವಕಾಶವಿದೆ ಎಂದು ಅಧ್ಯಕ್ಷರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News