×
Ad

ಮಂಗಳೂರು : ಆಟೊ ರಿಕ್ಷಾ ನಿಲ್ದಾಣಗಳ ಬಗ್ಗೆ ಮೇಯರ್ ಸಭೆ

Update: 2022-04-26 20:20 IST

ಮಂಗಳೂರು : ನಗರದ ಆಟೊ ರಿಕ್ಷಾ ನಿಲ್ದಾಣಗಳ ಸ್ಥಳ ಅಂತಿಮಗೊಳಿಸುವ ಬಗ್ಗೆ ಮಂಗಳವಾರ ಮನಪಾ ಸಭಾಂಗಣದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಸ್ಟೇಟ್‌ಬ್ಯಾಂಕ್ ಸಮೀಪದ ಹ್ಯಾಮಿಲ್ಟನ್ ಸರ್ಕಲ್ ಸಮೀಪದ ರಿಕ್ಷಾ ಪಾರ್ಕ್ ಸಹಿತ ನಗರದ ಹಲವು ಪಾರ್ಕ್‌ಗಳನ್ನು  ತೆರವುಗೊಳಿಸಿರುವುದರ ಬಗ್ಗೆ ರಿಕ್ಷಾ ಚಾಲಕರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಸ್ತುತ ಆಯ್ಕೆ ಮಾಡಲಾದ ೨೧೦ ರಿಕ್ಷಾ ಪಾರ್ಕ್‌ಗಳಲ್ಲಿ ಹೆಚ್ಚುವರಿಯಾಗಿ ೧೦-೧೫ ಪಾರ್ಕ್‌ಗಳನ್ನು ಅಧಿಕೃತ ಮಾಡಲು ತಿಳಿಸಿದರೂ ಯಾವುದೇ ಕ್ರಮಕೈಗೊಂಡಿರುವುದಿಲ್ಲ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮೇಯರ್ ಕೆಲವು ಕಡೆಗಳಲ್ಲಿ ರಸ್ತೆ ವಿಸ್ತರಣೆ ಮಾಡುವಾಗ ರಿಕ್ಷಾ ಪಾರ್ಕ್‌ಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿತ್ತು. ಭವಿಷ್ಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ತಿಳಿಸಿದರು.

ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ ಪ್ರಸ್ತುತ ನಗರದಲ್ಲಿ ೨೧೦ ಆಟೋ ರಿಕ್ಷಾ ಪಾರ್ಕ್‌ಗಳನ್ನು ಅಧಿಕೃತ ಗೊಳಿಸಲು ನಿರ್ಣಯಿಸಲಾಗಿದೆ. ಹೆಚ್ಚುವರಿ ರಿಕ್ಷಾ ಪಾರ್ಕ್ ಬೇಕಾದಲ್ಲಿ ಮನವಿ ಸಲ್ಲಿಸಿದರೆ ಪರಿಶೀಲಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News