×
Ad

ಮಂಗಳೂರು; ಪ್ರಾಧ್ಯಾಪಕಿಗೆ ಕಿರುಕುಳ ಪ್ರಕರಣ: ಆರೋಪಿಗಳಿಗೆ ಜಾಮೀನು

Update: 2022-04-26 21:15 IST

ಮಂಗಳೂರು : ಬಂಟ್ವಾಳದ ಕಾಲೇಜೊಂದರ ಪ್ರಾಧ್ಯಾಪಕಿಗೆ ಕೀಳು ಮಟ್ಟದ ಭಾಷೆಯಲ್ಲಿ ಹಾಗೂ ಮಾನಹಾನಿಕರ ವಾಗಿ ಪತ್ರ ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳಿಗೆ ನ್ಯಾಯಾಲಯ  ಜಾಮೀನು ನೀಡಿದೆ.

ಕಾಲೇಜಿನ ಸಂಚಾಲಕ, ಅರ್ಥಶಾಸ್ತ್ರ ಉಪನ್ಯಾಸಕ ಬಂಟ್ವಾಳ ಸಿದ್ಧಕಟ್ಟೆ ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ  ಹಾಗೂ ಕ್ರೀಡಾ ತರಬೇತಿದಾರ ಹೆಬ್ರಿ ನಾಡ್ಪಾಲು ನಿವಾಸಿ ತಾರಾನಾಥ ಬಿ.ಎಸ್.ಶೆಟ್ಟಿಗೆ ಎಂಬರಿಗೆ ನ್ಯಾಯಾಲಯ  ಜಾಮೀನು ನೀಡಿದೆ.

ಪ್ರಮುಖ ಆರೋಪಿ ಕಾಲೇಜಿನ ಸಂಚಾಲಕ ಬೆಳ್ತಂಗಡಿಯ ಲಾಯಿಲ ನಿವಾಸಿ ಪ್ರಕಾಶ್ ಶೆಣೈಗೆ ನ್ಯಾಯಾಲಯ ಕಳೆದ ಶುಕ್ರವಾರ ಜಾಮೀನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News