ಅರಸಿಕಟ್ಟೆಯಲ್ಲಿ ಸಮಗ್ರ ಕೃಷಿ ಮಾಹಿತಿ
Update: 2022-04-27 20:04 IST
ಉಡುಪಿ : ಉಡುಪಿ ಜಿಲ್ಲಾ ಕೃಷಿಕ ಸಂಘ ಆಯೋಜಿಸಿರುವ ಸಮಗ್ರ ಕೃಷಿ ಮಾಹಿತಿ ಸಭೆ ಎ.28ರ ಗುರುವಾರ ಸಂಜೆ 4 ಗಂಟೆಗೆ ಜನೆವಿವ್ ತಾವ್ರೋ, ಬಂಟಕಲ್ಲು ಅರಸಿಕಟ್ಟೆ ಇವರ ಮನೆ ವಠಾರದಲ್ಲಿ ನಡೆಯಲಿದೆ.
ಕುರ್ಕಾಲು ಗ್ರಾಪಂ ಅಧ್ಯಕ್ಷ ಮಹೇಶ್ ಶೆಟ್ಟಿ ಬಿಳಿಯಾರು ಉದ್ಘಾಟಿಸಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನೆವಿವ್ ತಾವ್ರೋ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜೇಸಿ ಸಂತೋಷ್‌ಕುಮಾರ್ ಮಾತಿದಾರರಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ಹಾಗೂ ಜೋಸೆಫ್ ಲೋಬೋ ಶಂಕರಪುರ ಭಾಗವಹಿಸಲಿದ್ದಾರೆ.
ವೈಜ್ಞಾನಿಕವಾಗಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವ ರೀತಿಯಲ್ಲಿ ಕೃಷಿ ಮಾಡುವ ವಿಧಾನಗಳು, ನಾಟಿ, ನಿರ್ವಹಣೆ, ಕೀಟ-ರೋಗ ಬಾಧೆ ಹತೋಟಿ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಆಸಕ್ತ ಕೃಷಿಕರು ಭಾಗವಹಿಸುವಂತೆ ತಿಳಿಸಲಾಗಿದೆ.