ಪ್ರಧಾನಿಯೊಂದಿಗಿನ ಸಂವಾದದ ವೇಳೆ ಕೇಜ್ರಿವಾಲ್ 'ದೇಹಭಾಷೆ'ಗೆ ಬಿಜೆಪಿ ತರಾಟೆ: ವೀಡಿಯೊ ವೈರಲ್

Update: 2022-04-27 17:59 GMT
Photo: SS/Twitter

ಹೊಸದಿಲ್ಲಿ: ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಕೋವಿಡ್ -19 ಪರಿಶೀಲನಾ ಸಭೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕುರ್ಚಿಯ ಆರಾಮವಾಗಿ ಕೂರುವ ಭಂಗಿಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಬಲಪಂಥೀಯರು ಹಾಗೂ ಬಿಜೆಪಿ ಕೇಜ್ರಿವಾಲ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. 
 
ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುತ್ತಿರುವಾಗ ಕೇಜ್ರಿವಾಲ್ ಅವರು ತಮ್ಮ ಎರಡೂ ತೋಳುಗಳನ್ನು ತಮ್ಮ ತಲೆಯ ಮೇಲೆ ಎತ್ತಿ ಇಡುವ, ಕುರ್ಚಿಯ ಹಿಂಭಾಗಕ್ಕೆ ಇಟ್ಟು ಒರಗಿಕೊಳ್ಳುವ ಹಾಗೂ ಆಸನದಿಂದ ಕೆಳಗೆ ಜಾರುತ್ತಿರುವ ದೃಶ್ಯಗಳು ಟ್ವಿಟರ್‌ನಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಈ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿರುವ ದಿಲ್ಲಿ ಬಿಜೆಪಿ ಘಟಕ "ದಿಲ್ಲಿಯ ಶಿಷ್ಟಾಚಾರವಿಲ್ಲದ ಸಿಎಂ!" ಎಂದು ಬರೆದುಕೊಂಡಿದೆ. 

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕರ್ನಾಟಕದ ಬಸವರಾಜ್ ಬೊಮ್ಮಾಯಿ, ಛತ್ತೀಸ್‌ಗಢದ ಭೂಪೇಶ್ ಬಾಘೇಲ್ ಮತ್ತು ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಇತರ ರಾಜ್ಯದ ಮುಖ್ಯಮಂತ್ರಿಗಳು ಬಿಜೆಪಿ ಹಂಚಿಕೊಂಡ 19 ಸೆಕೆಂಡುಗಳ ವೀಡಿಯೊ ಕ್ಲಿಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News