×
Ad

ಫಾದರ್ ಮುಲ್ಲರ್ ಸಂಸ್ಥೆಯ ಚೀಫ್ ನರ್ಸಿಂಗ್ ಅಧಿಕಾರಿ ಭ. ಜಾನೆಟ್‌ಗೆ ಬೀಳ್ಕೊಡುಗೆ

Update: 2022-04-30 19:11 IST

ಮಂಗಳೂರು : ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ಮುಖ್ಯ ನರ್ಸಿಂಗ್ ಅಧಿಕಾರಿ ಭಗಿನಿ ಜಾನೆಟ್ ಡಿಸೋಜಾರಿಗೆ ಬೀಳ್ಕೊಡುಗೆ ಹಾಗೂ ನೂತನ ಅಧಿಕಾರಿ ಭಗಿನಿ ಧನ್ಯಾ ದೇವಾಸಿಯಾ ಅವರ ಅಧಿಕಾರ ಸ್ವೀಕಾರ ಸಮಾರಂಭ ಇಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಭಗಿನಿ ಜಾನೆಟ್ ಡಿಸೋಜಾ ಅವರು ಸಂಸ್ಥೆಯಲ್ಲಿ ೧೯೯೦ರ ಸೆಪ್ಟಂಬರ್‌ನಿಂದ ೨೦೧೦ರ ಎಪ್ರಿಲ್‌ವರೆಗೆ ಹಾಗೂ ೨೦೧೩ರ ಎಪ್ರಿಲ್‌ನಿಂದ ಮತ್ತೆ ಈವರೆಗೆ ಸಂಸ್ಥೆಯಲ್ಲಿ  ೨೮ ವರ್ಷಗಳು ಹಾಗೂ ೮ ತಿಂಗಳ ಸುದೀರ್ಘ ಸೇವೆಯನ್ನು ಒದಗಿಸಿದ್ದಾರೆ.

ಸ್ಟಾಫ್ ನರ್ಸ್, ವಾರ್ಡ್ ಸುಪರ್‌ವೈಸರ್, ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥರಾಗಿ ಸಹಾಯಕ ನರ್ಸಿಂಗ್ ಸುಪರ್‌ ವೈಸರ್ ಆಗಿ, ಮಾತ್ರವಲದೆ, ಬಳಿಕ ಎಂಸ್ಸಿ ನರ್ಸಿಂಗ್ ಅಧ್ಯಯನದ ಬಳಿಕ ಅವರು ಉಪನ್ಯಾಸಕರು/ ನರ್ಸಿಂಗ್ ಸುಪರಿಂಟೆಂಡೆಂಟ್ ಆಗಿಯೂ ಸೇವೆ ಸಲ್ಲಿಸಿ, ಸಹಾಯಕ ಪ್ರೊಫೆಸರ್/ ಚೀಫ್ ನರ್ಸಿಂಗ್ ಅಧಿಕಾರಿಯಾಗಿ ಅವರು ಫದಾರ್ ಮುಲ್ಲರ್ ನರ್ಸಿಂಗ್ ಕಾಲೇಜಿಗೆ ಭಡ್ತಿ ಹೊಂದುವ ಮೂಲಕ ಸಂಸ್ಥೆಯಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರುಡಾಲ್ಫ್ ರವಿ ಡೇಸಾ ಸ್ವಾಗತಿಸಿ ಭಗಿನಿ ಜಾನೆಟ್ ಅವರ ಸೇವೆಯ ಬಗ್ಗೆ ವಿವರ ನೀಡಿದರು. ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಅವರು ಭಗಿನಿ ಅವರ ಕೆಲಸ ಕಾರ್ಯಗಳನ್ನು ಶ್ಲಾಘಿಸಿ ದರಲ್ಲದೆ, ಬೆಂಗಳೂರು ಸೊಲ್ಲೂರುಇನ ಮದರ್ ಸುಪೀರಿಯರ್ ಆಗಿ ತಮ್ಮ ಮುಂದಿನ ಪಯಣ ಬೆಳೆಸುತ್ತಿರುವ ಭ. ಜಾನೆಟ್‌ರನ್ನು ಅಭಿನಂದಿಸಿದರು.

ಡಾ. ಉದಯ ಕುಮಾರ್ ಅವರು ಭಗಿನಿ ಜಾನೆಟ್ ಜತೆ ಸಂಸ್ಥೆಯಲ್ಲಿ ಸೇವಾವಧಿಯಲ್ಲಿ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಭಗಿನಿ ಜಾನೆಟ್ ಅವರನ್ನು ಶಾಲು, ಹಣ್ಣುಹಂಪಲು, ಸನ್ಮಾನ ಪತ್ರ ದೊಂದಿಗೆ ಸನ್ಮಾನಿಸಲಾಯಿತು. ನರ್ಸಿಂಗ್ ಸುಪರಿಂಟೆಂಡೆಂಟ್ ಹೆಲೆನ್ ಲೋಬೋ ಸನ್ಮಾನ ಪತ್ರ ವಾಚಿಸಿದರು.

ಇದೇ ವೇಳೆ ಸಂಸ್ತೆಯ ಮುಖ್ಯ ನರ್ಸಿಂಗ್ ಅಧಿಕಾರಿ (ಚೀಫ್ ನರ್ಸಿಂಗ್ ಅಫೀಸರ್) ಆಗಿ ಭಗಿನಿ ಧನ್ಯಾ ದೇವಾಸಿಯ ಅವರು ಅಧಿಕಾರ ಸ್ವೀಕರಿಸಿದರು. ಸಿಸ್ಟರ್ಸ್ ಆಫ್ ಚಾರಿಟಿಯ ಭಗಿನಿ ಧನ್ಯಾ ದೇವಾಸಿಯಾ ಅವರು ನರ್ಸಿಂಗ್ ಕ್ಷೇತ್ರದಲ್ಲಿ ೧೭ ವರ್ಷಗಳ ಸೇವಾನುಭವವನ್ನು ಹೊಂದಿದ್ದಾರೆ. ಅವರು ಜಿಎನ್‌ಎಂ, ಪಿಬಿಬಿಎಸ್‌ಸಿ ಹಾಗೂ ಎಂಎಸ್ಸಿ ನರ್ಸಿಂಗ್ ಪದವೀಧರರಾಗಿದ್ದು, ಪ್ರಸ್ತುತ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದಾರೆ. ಅಥೆನಾ ನರ್ಸಿಂಗ್ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿರುವ ಅವರು, ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ತಮ್ಮ ಕರ್ತವ್ಯಕ್ಕೆ ಎಲ್ಲರ ಸಹಕಾರವನ್ನು ಅವರು ಕೋರಿದರು.

ಸಮಾರಂಭದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರತಿನಿಧಿಗಳು ಉಪಸ್ಥಿತರಿದ್ದರು. ನರ್ಸಿಂಗ್ ಸುಪರ್‌ವೈಸರ್ ಮಾಲಿನಿ ವಂದಿಸಿದರು. ನರ್ಸಿಂಗ್ ವಿಭಾಗದ ರೆನಿಟಾ ಲಸ್ರಾದೋ ಮತ್ತು ಕ್ಯಾರಲ್ ಕ್ವೀನಾ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News