ಮಂಗಳೂರು: ವರ್ಗಾವಣೆಗೊಂಡ ಇನ್‌ಸ್ಪೆಕ್ಟರ್‌ಗಳಿಗೆ ಬೀಳ್ಕೊಡುಗೆ
Update: 2022-04-30 20:32 IST
ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಿಂದ ವರ್ಗಾವಣೆಗೊಂಡ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಶನಿವಾರ ಪೊಲೀಸ್ ಆಯುಕ್ತರ ಮನೆಯಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ಜ್ಯೋತಿರ್ಲಿಂಗ ಹೊನಕಟ್ಟಿ, ಸಿದ್ಧ ಗೌಡ ಭಜಂತ್ರಿ, ಅಶೋಕ್ ಪಿ., ಲೋಕೇಶ್ ಎ.ಸಿ., ಗುರುದತ್ ಕಾಮತ್, ರೇವತಿ ಎನ್. ಅವರನ್ನು ಬೀಳ್ಕೊಡಲಾಯಿತು.
ರಾಜ್ಯ ಗುಪ್ತವಾರ್ತೆಯಲ್ಲಿದ್ದ ಮಂಜುನಾಥ ಪಾಂಡೇಶ್ವರ ಠಾಣೆಗೆ ಆಗಮಿಸಿದ್ದು, ಅವರನ್ನು ಸ್ವಾಗತಿಸಲಾಯಿತು.
ಈ ಸಂದರ್ಭ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ಬಿ.ಪಿ. ದಿನೇಶ್ ಕುಮಾರ್, ಚನ್ನವೀರಪ್ಪ ಹಡಪದ್, ಎಸಿಪಿಗಳಾದ ದಿನಕರ ಶೆಟ್ಟಿ, ರವೀಶ್ ನಾಯಕ್, ಮುರುಗೆಪ್ಪ ಉಪಾಸೆ, ಎಂ.ಎ.ನಟರಾಜ್ ಉಪಸ್ಥಿತರಿದ್ದರು.