×
Ad

ಹೆಚ್ಚುತ್ತಿರುವ ಬಿಸಿಲ ಧಗೆಯಿಂದಾಗಿ ಶಾಲೆಯ ಸಮಯವನ್ನೇ ಬದಲಾಯಿಸಿದ ಈ ರಾಜ್ಯ ಸರಕಾರ !

Update: 2022-05-02 12:02 IST

ಭುವನೇಶ್ವರ: ರಾಜ್ಯದಲ್ಲಿ ಬಿಸಿಲ ಧಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಡಿಶಾ ಸರಕಾರವು ರಾಜ್ಯದ ಶಾಲೆಗಳ ಸಮಯವನ್ನು ಪರಿಷ್ಕರಿಸಿದೆ. ಮೇ 2 ರಿಂದ ಶಾಲೆಗಳು ಬೆಳಿಗ್ಗೆ 6 ರಿಂದ 9 ರವರೆಗೆ ಆಫ್‌ಲೈನ್ ತರಗತಿಗಳನ್ನು ನಡೆಸುತ್ತವೆ ಎಂದು ಶಾಲಾ ಹಾಗೂ ಸಮೂಹ ಶಿಕ್ಷಣ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

“ಸರಕಾರವು ಪರಿಸ್ಥಿತಿಯನ್ನು  ಎಚ್ಚರಿಕೆಯಿಂದ ಪರಿಗಣಿಸಿದ ನಂತರ ಎಲ್ಲಾ ಶಾಲೆಗಳಲ್ಲಿ ಬೋಧನಾ ಸಮಯವನ್ನು ಮೇ 2,2022ಕ್ಕೆ ಅನ್ವಯವಾಗುವಂತೆ ಬೆಳಿಗ್ಗೆ 6.00 ರಿಂದ 9.00 ರವರೆಗೆ ನಿಗದಿಪಡಿಸಲು ಮುಂದಾಗಿದೆ. ಆದಾಗ್ಯೂ, ಈಗಾಗಲೇ ವಿವಿಧ ಮಂಡಳಿಗಳು/ಕೌನ್ಸಿಲ್‌ಗಳು ನಿಗದಿಪಡಿಸಿರುವ ಪರೀಕ್ಷೆಗಳು ಎಂದಿನಂತೆ ಮುಂದುವರಿಯಲಿವೆ” ಎಂದು ಸರಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News