ದೇಶದ ಜನತೆಗೆ ಈದುಲ್‌ ಫಿತ್ರ್‌ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಹುಲ್‌ ಗಾಂಧಿ

Update: 2022-05-02 16:17 GMT

ಹೊಸದಿಲ್ಲಿ: ದೇಶದಾದ್ಯಂತ ಮೇ 2 ಮತ್ತು 3ರಂದು ಭಾರತೀಯ ಮುಸ್ಲಿಮರು ವಿವಿಧೆಡೆಗಳಲ್ಲಿ ಈದುಲ್‌ ಫಿತ್ರ್‌ ಹಬ್ಬ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವಿಟರ್‌ ಮೂಲಕ ಶುಭಾಶಯ ಸಲ್ಲಿಸಿದ್ದಾರೆ.

"ಈದುಲ್‌ ಫಿತ್ರ್‌ ಶುಭಕಾಮನೆಗಳು. ಈ ಶುಭ ಸಂದರ್ಭವು ನಮ್ಮ ಸಮಾಜದಲ್ಲಿ ಒಗ್ಗಟ್ಟಿನ ಮತ್ತು ಸಹೋದರತ್ವದ ಮನೋಭಾವವನ್ನು ಹೆಚ್ಚಿಸಲಿ. ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡಲಿ" ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. "ಈದ್ ಮುಬಾರಕ್. ಈ ಪವಿತ್ರ ಹಬ್ಬವು ಪ್ರೀತಿಯ ಮನೋಭಾವವನ್ನು ತರಲಿ ಮತ್ತು ನಮ್ಮೆಲ್ಲರನ್ನು ಸಹೋದರತ್ವ ಮತ್ತು ಸೌಹಾರ್ದತೆಯ ಬಾಂಧವ್ಯದಲ್ಲಿ ಒಂದುಗೂಡಿಸಲಿ" ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News