×
Ad

ಐಪಿಎಲ್: ರಾಜಸ್ಥಾನ ವಿರುದ್ಧ ಕೆಕೆಆರ್‌ಗೆ ಜಯ

Update: 2022-05-02 23:31 IST

    ಮುಂಬೈ, ಮೇ 2: ನಿತಿಶ್ ರಾಣಾ (ಔಟಾಗದೆ 48 ರನ್, 37 ಎಸೆತ, 3 ಬೌಂಡರಿ, 2 ಸಿಕ್ಸರ್)ಹಾಗೂ ರಿಂಕು ಸಿಂಗ್(ಔಟಾಗದೆ 42 ರನ್, 23 ಎಸೆತ, 6 ಬೌಂಡರಿ, 1 ಸಿಕ್ಸರ್) 4ನೇ ವಿಕೆಟ್‌ಗೆ ಸೇರಿಸಿದ 66 ರನ್ ಜೊತೆಯಾಟದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.

ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ನ 47ನೇ ಪಂದ್ಯದಲ್ಲಿ ಗೆಲ್ಲಲು 153 ರನ್ ಗುರಿ ಪಡೆದ ಕೆಕೆಆರ್ 19.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 158 ರನ್ ಗಳಿಸಿತು.
 
 ಕೆಕೆಆರ್ 32 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಆಗ ನಾಯಕ ಶ್ರೇಯಸ್ ಅಯ್ಯರ್ (34 ರನ್)ಅವರೊಂದಿಗೆ 3ನೇ ವಿಕೆಟ್‌ಗೆ 60 ರನ್ ಸೇರಿಸಿದ ರಾಣಾ ತಂಡವನ್ನು ಆಧರಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ತಂಡ ನಾಯಕ ಸಂಜು ಸ್ಯಾಮ್ಸನ್ 54 ರನ್(49 ಎಸೆತ, 7 ಬೌಂಡರಿ, 1 ಸಿಕ್ಸರ್)ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು.
ರಾಜಸ್ಥಾನವು ನಾಯಕ ಸ್ಯಾಮ್ಸನ್, ಶಿಮ್ರಾನ್ ಹೆಟ್ಮೆಯರ್(ಔಟಾಗದೆ 27, 13 ಎಸೆತ)ಜೋಸ್ ಬಟ್ಲರ್(22 ರನ್, 25 ಎಸೆತ), ರಿಯಾನ್ ಪರಾಗ್(19 ರನ್,12 ಎಸೆತ)ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು.

ಕೆಕೆಆರ್ ಪರ ಟಿಮ್ ಸೌಥಿ(2-46) ಯಶಸ್ವಿ ಬೌಲರ್ ಎನಿಸಿಕೊಂಡರು. ಶಿವಂ ಮಾವಿ(1-23), ಉಮೇಶ್ ಯಾದವ್(1-24) ಹಾಗೂ ಅನುಕೂಲ್ ರಾಯ್(1-28) ತಲಾ ಒಂದು ವಿಕೆಟ್ ಪಡೆದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News