×
Ad

ವಿಶ್ವದ ಅತೀ ಎತ್ತರದ ಮಹಿಳೆ ಟರ್ಕಿಯ ರುಮೈಸಾ ಗೆಲ್ಗಿಯಿಂದ ಮತ್ತೆ 3 ವಿಶ್ವದಾಖಲೆ ‌ನಿರ್ಮಾಣ !

Update: 2022-05-04 22:13 IST
REUTERS

ಅಂಕಾರ, ಮೇ 4: ವಿಶ್ವದ ಅತೀ ಎತ್ತರದ ಮಹಿಳೆಯೆಂದು ಗಿನ್ನೆಸ್ ವಿಶ್ವದಾಖಲೆ(ಜಿಡಬ್ಲ್ಯೂಆರ್)ಯಲ್ಲಿ ಹೆಸರುಪಡೆದ ಟರ್ಕಿಯ ರುಮೈಸಾ ಗೆಲ್ಗಿ ಈಗ ಮತ್ತೆ 3 ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದು ಈಗ 5 ವಿಶ್ವದಾಖಲೆಗಳ ಒಡತಿ ಎನಿಸಿಕೊ0ಡಿರುವುದಾಗಿ ಜಿಡಬ್ಲ್ಯೂಆರ್ ವರದಿ ಮಾಡಿದೆ.

2022ರ ಎಪ್ರಿಲ್‌ನಲ್ಲಿ ರುಮೈಸಾ ಮತ್ತೆ 3 ವಿಶ್ವದಾಖಲೆಗೆ ಪಾತ್ರವಾಗಿದ್ದು ಇದನ್ನು ಜಿಡಬ್ಲ್ಯೂಆರ್ ದೃಢಪಡಿಸಿದೆ. ಜೀವಂತ ಇರುವ ಮಹಿಳೆಯರಲ್ಲಿ ಅತೀ ದೊಡ್ಡ ಬೆರಳು (11.2 ಸೆಂಟಿಮೀಟರ್), ಜೀವಂತ ಮಹಿಳೆಯರಲ್ಲಿ ಅತೀ ದೊಡ್ಡ ಕೈಗಳು( ಅವರ ಬಲಗೈ 24.93 ಸೆಂಟಿಮೀಟರ್ ಉದ್ದವಿದ್ದರೆ, ಎಡಗೈ 24.26 ಸೆ.ಮೀ ಉದ್ದವಿದೆ. ಅಲ್ಲದೆ ಜೀವಂತ ಮಹಿಳೆಯರಲ್ಲಿ ಅತೀ ದೊಡ್ಡ ಬೆನ್ನು(59.90 ಸೆ.ಮೀ) ಹೊಂದಿರುವ ದಾಖಲೆ ಬರೆದಿದ್ದಾರೆ. 1997ರ ಜನವರಿ 1ರಂದು ಜನಿಸಿರುವ ರುಮೈಸಾ , ವಿಶ್ವದ ಅತೀ ಎತ್ತರದ ಮಹಿಳೆಯೆಂಬ ದಾಖಲೆಗೆ(7 ಅಡಿ 0.7 ಇಂಚು) 2021ರ ಅಕ್ಟೋಬರ್‌ನಲ್ಲಿಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News