ಏಣಗುಡ್ಡೆ ಶ್ರೀಬ್ರಹ್ಮ ಬೈದೇರುಗಳ ಗರಡಿ ಹೊರೆಕಾಣಿಕೆ ಮೆರವಣಿಗೆ

Update: 2022-05-09 11:30 GMT

ಕಾಪು, ಮೇ 9: ಸಮಗ್ರವಾಗಿ ಜೀರ್ಣೋದ್ಧಾರಗೊಂಡಿರುವ ಕಟಪಾಡಿ ಏಣಗುಡ್ಡೆ ಶ್ರೀಬ್ರಹ್ಮ ಬೈದೇರುಗಳ ಗರಡಿಯಲ್ಲಿ ನಡೆಯಲಿರುವ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಹಾಗೂ ಶ್ರೀಬ್ರಹ್ಮ ಬೈದೇರುಗಳ ಹಾಗೂ ಪರಿವಾರ ಶಕ್ತಿಗಳ ನೇಮೋತ್ಸವ ಕಾರ್ಯಕ್ರಮದ ಪ್ರಯುಕ್ತ ನಗನಾಣ್ಯ, ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ರವಿವಾರ ಸಂಪನ್ನಗೊಂಡಿತು.

ಮೂಡಬೆಟ್ಟು ಚೌಟರಕಟ್ಟೆ ಶ್ರೀಧೂಮಾವತಿ ದೈವಸ್ಥಾನದಲ್ಲಿ ಗರಡಿಯ ಪೂಜಾ ಪೂಜಾರಿ ಇಂಪು ಪೂಜಾರಿ ಅವರು ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಮೂಡಬೆಟ್ಟು ಚೌಟರಕಟ್ಟೆಯಿಂದ ಗರಡಿಯ ಸನ್ನಿಧನದವರೆಗೆ ನಡೆದ ಮೆರವಣಿಗೆಯಲ್ಲಿ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಎಲ್ಲೂರು ಶ್ರೀವಿಶ್ವನಾಥ ದೇವಸ್ಥಾನ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರಗಳ ವತಿಯಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ.ರಾಜ್‌ಶೇಖರ್ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಎನ್.ಪೂಜಾರಿ, ಸಮಿತಿಯ ಗೌರವಾಧ್ಯಕ್ಷರಾದ ಗಂಗಾಧರ ಸುವರ್ಣ, ಪ್ರೇಂ ಕುಮಾರ್, ಗೌರವ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಕೋಶಾಧಿಕಾರಿ ದುಗ್ಗಪ್ಪಬಂಗೇರ, ಗೌರವ ಸಲಹೆಗಾರ ರಾದ ಉಮೇಶ್ ಕೋಟ್ಯಾನ್, ಆರ್.ಜಿ.ಕೋಟ್ಯಾನ್, ಜೊತೆ ಕೋಶಾಧಿಕಾರಿ ಚಂದ್ರಹಾಸ ಕೋಟ್ಯಾನ್, ಕಾರ್ಯದರ್ಶಿಗಳಾದ ಕಾಮರಾಜ್ ಸುವರ್ಣ, ರಿತೇಶ್ ಕೋಟ್ಯಾನ್, ಉಪಾಧ್ಯಕ್ಷರುಗಳಾದ ಗೀತಾಂಜಲಿ ಸುವರ್ಣ, ಜಗನ್ನಾಥ್ ಕೋಟೆ, ಮಹೇಶ್ ಪೋಜಾರಿ, ಗರಡಿ ಜವನೆರ್ ತಂಡದ ಅಧ್ಯಕ್ಷ ಸುಧೀರ್ ರಾಜ್ ಪೂಜಾರಿ, ಮುಂಬಯಿ ಸಮಿತಿಯ ಅಧ್ಯಕ್ಷ ಗೋಪಾಲ ಕಾಂಚನ್, ಕೋಟೆ ಗ್ರಾಪಂ ಅಧ್ಯಕ್ಷ ಕಿಶೋರ್ ಅಂಬಾಡಿ, ಕಟಪಾಡಿ ಗ್ರಾಪಂ ಅಧ್ಯಕ್ಷೆ ಇಂದಿರಾ ಅಚಾರ್ಯ, ಕಟಪಾಡಿ ಶಂಕರ ಪೂಜಾರಿ, ನವೀನ್ ಅಮೀನ್ ಶಂಕರಪುರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News