×
Ad

ಅರಬಿ ಸಮುದ್ರ ಪ್ರಕ್ಷುಬ್ಧ : ಪ್ರವಾಸಿಗರಿಗೆ ಎಚ್ಚರಿಕೆ

Update: 2022-05-09 19:13 IST

ಉಡುಪಿ : ಪ್ರಸ್ತುತ ಉಂಟಾಗಿರುವ ಚಂಡಮಾರುತದಿಂದ ಅರಬೀ ಸಮುದ್ರದಲ್ಲಿ ತೀವ್ರವಾದ ಗಾಳಿ ಹಾಗೂ ದೊಡ್ಡ ಅಲೆಗಳು ಏಳುತ್ತಿರುವುದರಿಂದ  ಸಮುದ್ರವು ಪ್ರಕ್ಷುಬ್ಧಗೊಂಡಿದ್ದು, ಅಪಾಯಕಾರಿಯಾಗಿರುವುದರಿಂದ ಪ್ರವಾಸಿಗರು ಸಮುದ್ರಕ್ಕೆ ಇಳಿಯಬಾರದು.

ಪ್ರವಾಸೀ ಬೋಟ್ ಮಾಲಕರು, ಬೀಚ್ ಪ್ರದೇಶದಲ್ಲಿ ನಡೆಸಲಾಗುವ ಜಲಕ್ರೀಡೆಯ ಬೋಟ್ ಚಟುವಟಿಕೆ ಹಾಗೂ ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರಯಾಣಿಸುವ ಎಲ್ಲಾ ಪ್ರವಾಸ ಬೋಟ್‌ಗಳನ್ನು ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲಾಡಳಿತದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸುವಂತೆ ನಗರಸಭೆ ಪೌರಾಯುಕ್ತರು ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಡಾ.ಉದಯ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News