ಕೆಥೊಲಿಕ್ ಸಭಾದಿಂದ ನಾಯಕತ್ವ ತರಬೇತಿ- ಸಹಮಿಲನ ಕಾರ್ಯಕ್ರಮ
ಉಡುಪಿ : ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವತಿಯಿಂದ ಧರ್ಮಪ್ರಾಂತ್ಯ ವ್ಯಾಪ್ತಿಯ ಘಟಕಗಳ ಪದಾಧಿಕಾರಿಗಳ ನಾಯಕತ್ವ ತರಬೇತಿ ಮತ್ತು ಸಹಮಿಲನ ಕಾರ್ಯಕ್ರಮವನ್ನು ಉಡುಪಿಯ ಡಾನ್ ಬೋಸ್ಕೊ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಸಹಮಿಲನವನ್ನು ಕೆಥೊಲಿಕ್ ಸಭಾ ಮಾಜಿ ಕೇಂದ್ರಿಯ ಅಧ್ಯಕ್ಷ ಆಲ್ಫೋನ್ಸ್ ಡಿಕೋಸ್ತಾ ಉದ್ಘಾಟಿಸಿದರು. ಕೆಥೊಲಿಕ್ ಸಭಾದ ಧ್ಯೇಯ ಮತ್ತು ಉದ್ಧೇಶಗಳ ಕುರಿತು ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಸಂಘಟನೆಯಲ್ಲಿ ಪದಾಧಿ ಕಾರಿಗಳ ಕರ್ತವ್ಯಗಳು ಮತ್ತು ಜವಾಬ್ದಾರಿಯ ಕುರಿತು ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಮಾಹಿತಿ ನೀಡಿದರು.
ಕೆಥೊಲಿಕ್ ಸಭಾದ ಮುಂದಿನ ಅವಧಿಯ ಕಾರ್ಯಯೋಜನೆಯನ್ನು ಅಧ್ಯಕ್ಷ ಮೇರಿ ಡಿಸೋಜ ಮಂಡಿಸಿ, ಮಾಜಿ ಅಧ್ಯಕ್ಷ ಡಾ.ಜೆರಾಲ್ಡ್ ಪಿಂಟೊ ಗುಂಪು ಚಟುವಟಿಕೆ ಮತ್ತು ಸದಸ್ಯರ ಅಭಿಪ್ರಾಯ ಕ್ರೋಡಿಕರಣವನ್ನು ನೆರವೇರಿಸಿದರು. ಕಾರ್ಯಕ್ರಮದ ಸಂಚಾಲಕ ವಲೇರಿಯನ್ ಫೆರ್ನಾಂಡಿಸ್ ಮೌಲ್ಯಮಾಪನ ನಡೆಸಿಕೊಟ್ಟರು.
ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿ ನಾಂಡ್ ಗೊನ್ಸಾಲ್ವಿಸ್, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು. ಅಧ್ಯಕ್ಷ ಮೇರಿ ಡಿಸೋಜ ಸ್ವಾಗತಿಸಿದರು. ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜ ವಂದಿಸಿದರು. ರೊನಾಲ್ಡ್ ಆಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು.