×
Ad

ಮೇ 20ರಿಂದ ನಿಟ್ಟೆಯಲ್ಲಿ ಹಲಸು ಮೇಳ, ಗ್ರಾಮೋತ್ಸವ

Update: 2022-05-09 20:46 IST

ಉಡುಪಿ : ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ನಿಟ್ಟೆ ಇಂಜಿನಿಯ ರಿಂಗ್ ಕಾಲೇಜು ಆವರಣದಲಿ ರಾಷ್ಟ್ರೀಯ ಹಲವು ಮೇಳ ಹಾಗೂ ನಿಟ್ಟೆ ಗ್ರಾಮೋತ್ಸವ ಮೇ ೨೦ರಿಂದ ೨೨ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

ಹಲಸಿನ ವಿವಿಧ ತಳಿಗಳು, ಅದನ್ನಾಧರಿಸಿದ ವಿವಿಧ ಉತ್ಪನ್ನಗಳು, ಹಲಸಿನ ಮೌಲ್ಯವರ್ಧನೆ, ಉದ್ಯಮಶೀಲತೆ, ಮಾರುಕಟ್ಟೆ, ಬ್ರಾಂಡಿಂಗ್ ಮುಂತಾದ ವಿಷಯಗಳ ಕುರಿತು ಇಲ್ಲಿ ತರಬೇತಿ ನೀಡಲಾಗುತ್ತದೆ. ಅಲ್ಲದೇ ಪ್ರಾತ್ಯಕ್ಷಿಕೆ, ಪ್ರದರ್ಶನ, ನೂರಾರು ಮಳಿಗೆಗಳು, ವಿವಿಧ ಸ್ಪರ್ಧೆಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News