ಶೀಘ್ರದಲ್ಲಿ ಸಂಪೂರ್ಣ ಅಸ್ಸಾಂನಿಂದ ಆಫ್ಸ್ಪಾ ರದ್ದು: ಅಮಿತ್ ಶಾ ವಿಶ್ವಾಸ

Update: 2022-05-10 16:38 GMT

ಗುವಾಹಟಿ, ಮೇ 10: ಸುಧಾರಿತ ಕಾನೂನು ಹಾಗೂ ಸುವ್ಯವಸ್ಥೆ, ಉಗ್ರಗಾಮಿ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದ ಅಸ್ಸಾಂನಲ್ಲಿ ಅಫ್ಸ್ಪಾ ಭಾಗಶಃ ಹಿಂಪಡೆಯಲು ಈಗಾಗಲೇ ಕಾರಣವಾಗಿರುವುದರಿಂದ ದಿರುವುದರಿಂದ ಶೀಘ್ರದಲ್ಲಿ ಸಂಪೂರ್ಣ ರಾಜ್ಯದಿಂದ ಆಫ್ಸ್ಪಾ ರದ್ದುಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇಲ್ಲಿ ಅಸ್ಸಾಂ ಪೊಲೀಸರಿಗೆ ರಾಷ್ಟ್ರಪತಿಯ ವರ್ಣಧ್ವಜವನ್ನು ನೀಡಿದ ಬಳಿಕ ಮಾತನಾಡಿದ ಅಮಿತ್ ಶಾ, ಕೇಂದ್ರ ಸರಕಾರ ಹಾಗೂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರ ಪ್ರಯತ್ನದಿಂದ ಹೆಚ್ಚಿನ ಉಗ್ರಗಾಮಿ ಸಂಘಟನೆಗಳು ಶಾಂತಿ ಒಪ್ಪಂದಕ್ಕೆ ಬಂದಿವೆ. ಸಮಗ್ರ ರಾಜ್ಯ ಬಂಡಾಯ ಹಾಗೂ ಹಿಂಸಾಚಾರದಿಂದ ಸಂಪೂರ್ಣವಾಗಿ ಮಕ್ತವಾಗುವ ದಿನ ದೂರವಿಲ್ಲ ಎಂದರು. ‘‘ಶಸಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು 23 ಜಿಲ್ಲೆಗಳಿಂದ ಹಿಂಪಡೆಯಲಾಗಿದೆ. ಅಲ್ಲದೆ ಒಂದು ಜಿಲ್ಲೆಯಿಂದ ಭಾಗಶಃ ಹಿಂಪಡೆಯಲಾಗಿದೆ. 

ಕಾಯ್ದೆಯನ್ನು ಸಂಪೂರ್ಣ ರಾಜ್ಯದಿಂದ ಶೀಘ್ರದಲ್ಲಿ ಹಿಂಪಡೆಯುವ ವಿಶ್ವಾಸ ನನಗಿದೆ’’ ಎಂದರು. ‘‘ಅಸ್ಸಾಂ ಪೊಲೀಸರು ಅದ್ಭುತ ಇತಿಹಾಸವನ್ನು ಇತಿಹಾಸ ಹೊಂದಿದ್ದಾರೆ. ಬಂಡಾಯ, ಗಡಿ ಸಮಸ್ಯೆ, ಶಸ್ತ್ರಾಸ್ತ್ರ, ಮಾದಕ ದ್ರವ್ಯ ಹಾಗೂ ಜಾನುವಾರುಗಳ ಕಳ್ಳ ಸಾಗಾಟ, ಘೇಂಡಾಮೃಗ ಭೇಟೆ ಹಾಗೂ ವಾಮಾಚಾರದಂತಹ ಸಾಮಾಜಿಕ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ದೇಶದ ಅಗ್ರಗಣ್ಯ ಪೊಲೀಸ್ ಪಡೆಗಳಲ್ಲಿ ಒಂದಾಗಿ ಅಸ್ಸಾಂ ಪೊಲೀಸ್ ಹೊರ ಹೊಮ್ಮಿದೆ’’ ಎಂದು ಅಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News