ದೇಶದಲ್ಲಿ ಮತ್ತೆ ಬೀಸಲಿದೆ ಬಿಸಿ ಗಾಳಿ: ಭಾರತೀಯ ಹವಾಮಾನ ಇಲಾಖೆ ಹೇಳಿಕೆ

Update: 2022-05-11 04:15 GMT

ಹೊಸದಿಲ್ಲಿ, ಮೇ 10: ದಿಲ್ಲಿಯಲ್ಲಿ ಬುಧವಾರ ಮತ್ತೆ ಬಿಸಿ ಗಾಳಿ ಬೀಸಲಿದೆ. ಈ ಸಂದರ್ಭ ಉಷ್ಣಾಂಶ 44 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಬಿಸಿ ಗಾಳಿ ಮೇ 15ರ ವರೆಗೆ ಮುಂದುವರಿಯುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಮಂಗಳವಾರ ಯೆಲ್ಲೋ ಮುನ್ನೆಚ್ಚರಿಕೆ ಘೋಷಿಸಲಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತ ಅಸಾನಿ ಪರಿಣಾಮದಿಂದ ಈ ವಲಯದಲ್ಲಿ ಪೂರ್ವ ಮಾರುತಗಳು ಬೀಸುತ್ತಿರುವುದರಿಂದ ದಿಲ್ಲಿಯ ಹೆಚ್ಚಿನ ಭಾಗಗಳಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗದು.

ಪೂರ್ವ ಮಾರುತಗಳು ಇಲ್ಲದೇ ಇದ್ದಿದ್ದರೆ, ಉಷ್ಣಾಂಶ 46ರಿಂದ 47 ಡಿಗ್ರಿ ಸೆಲ್ಸಿಯಸ್ಗೆ ತಲುಪುತ್ತಿತ್ತು ಎಂದು ಸ್ಕೈಮ್ಯಾಟ್ (ಹವಾಮಾನ ಹಾಗೂ ಹವಾಮಾನ ಬದಲಾವಣೆ) ಉಪಾಧ್ಯಕ್ಷ ಮಹೇಶ್ ಪಲವಾಟ್ ಅವರು ತಿಳಿಸಿದ್ದಾರೆ. ಪಶ್ಚಿಮದ ಶುಷ್ಕ ಹಾಗೂ ಬಿಸಿ ಗಾಳಿಗೆ ರಾಜಸ್ಥಾನ, ಗುಜರಾತ್ ಹಾಗೂ ವಿದರ್ಭದಲ್ಲಿ ಉಷ್ಣಾಂಶ 46ರಿಂದ 47 ಡಿಗ್ರಿ ಸೆಲ್ಸಿಯೆಸ್ಗೆ ಏರಿಕೆಯಾಗಲಿದೆ.

ಪಶ್ಚಿಮ ರಾಜಸ್ಥಾನದಲ್ಲಿ ಮೇ 10ರಿಂದ 13ರ ನಡುವೆ ಬಿಸಿ ಗಾಳಿ ತೀವ್ರ ಬಿಸಿಯಾಗುವ ಸಾಧ್ಯತೆ ಇದೆ. ಪೂರ್ವ ರಾಜಸ್ಥಾನದಲ್ಲಿ ಅಲ್ಲಲ್ಲಿ ಹಾಗೂ ನಿಗದಿತ ಸಮಯದಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಗುಜರಾತ್ನಲ್ಲಿ ಮೇ 10ರಂದು, ಮಹಾರಾಷ್ಟ್ರದ ವಿದರ್ಭ ಹಾಗೂ ಮಧ್ಯಪ್ರದೇಶದಲ್ಲಿ ಮೇ 10ರಿಂದ 13ರ ವರೆಗೆ, ದಕ್ಷಿಣ ಹರ್ಯಾಣ ಹಾಗೂ ದಕ್ಷಿಣ ಪಂಚಾಬ್ನಲ್ಲಿ ಮೇ 10ರಿಂದ 13ರ ವರೆಗೆ ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News