ಅಮಿತ್‌ ಶಾಗೆ ಕುಡಿಯಲು 850 ರೂಪಾಯಿಯ ನೀರಿನ ಬಾಟಲ್‌ ತರಲಾಗಿತ್ತು: ಗೋವಾ ಕೃಷಿ ಸಚಿವ

Update: 2022-05-10 16:53 GMT

ಪಣಜಿ: ಗೋವಾ ಪ್ರವಾಸದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ 850 ರೂಪಾಯಿ ಮೌಲ್ಯದ 'ಮಿನರಲ್ ವಾಟರ್' (ನೀರು) ಬಾಟಲಿಯನ್ನು ನೀಡಲಾಯಿತು ಮತ್ತು ಅದನ್ನು ಪಣಜಿಯಿಂದ 10 ಕಿಮೀ ದೂರದಲ್ಲಿರುವ ಪಟ್ಟಣದಿಂದ ತರಲಾಗಿತ್ತು ಎಂದು ಗೋವಾ ಕೃಷಿ ಸಚಿವ ರವಿ ನಾಯ್ಕ್ ಮಂಗಳವಾರ ಹೇಳಿದ್ದಾರೆ.

ಗೋವಾದಲ್ಲಿ ಮಳೆನೀರು ಕೊಯ್ಲಿಗೆ ಒತ್ತು ನೀಡಲು ಹಾಗೂ ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಎಷ್ಟು ಬೀಕರವಾಗಿರಲಿದೆ ಎಂಬುದನ್ನು ವಿವರಿಸಲು ಈ ದುಬಾರಿ ಖರೀದಿಯನ್ನು ಉಲ್ಲೇಖಿಸಿದ್ದಾರೆ. ಮತ್ತು ಭವಿಷ್ಯದಲ್ಲಿ ನೀರು ಹೇಗೆ ವಿರಳ ಮತ್ತು ಅಮೂಲ್ಯ ಸಂಪನ್ಮೂಲವಾಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.

 ಫೆಬ್ರುವರಿಯಲ್ಲಿ ನಡೆದ ಚುನಾವಣೆ ವೇಳೆ ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರು ಹಿಮಾಲಯ ಬ್ರ್ಯಾಂಡ್‌ನ ನೀರಿನ ಬಾಟಲು ನೀಡುವಂತೆ ಕೇಳಿಕೊಂಡರು. ಇಲ್ಲಿಂದ 10 ಕಿ.ಮೀ. ದೂರದ ಮಾಪುಸಾದಿಂದ ₹ 850 ಬೆಲೆಯ, ಆ ಬ್ರ್ಯಾಂಡಿನ ನೀರಿನ ಬಾಟಲು ತರಿಸಿ ಕೊಡಲಾಗಿತ್ತು ಎಂದು ರವಿ ತಿಳಿಸಿರುವುದಾಗಿ dnaindia.com ವರದಿ ಮಾಡಿದೆ.

ಅಮಿತ್ ಶಾಗೆ ಖರೀದಿಸಿದ ‘ಮಿನರಲ್ ವಾಟರ್’ ಬಾಟಲಿಗೆ 850 ರೂ. ಇದೆ, ಸಿತಾರ ಹೋಟೆಲ್‌ಗಳಲ್ಲಿ ಸಿಗುವ ಮಿನರಲ್‌ ವಾಟರ್‌ ಬಾಟಲ್‌ಗಳ ಬೆಲೆ 150ರಿಂದ 160 ರೂ.ಗಳಷ್ಟಿದೆ.ನೀರು ತುಂಬಾ ದುಬಾರಿಯಾಗಿದೆ ಎಂದು ರವಿ ನಾಯ್ಕ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News