ಮೇ 12 : ಬಿ.ಸಿ.ರೋಡು ಕರಾವಳಿ ಕಲೋತ್ಸವ ವೇದಿಕೆಯಲ್ಲಿ ರಾಜ್ಯ ಮಟ್ಟದ ದಫ್ ಸ್ಪರ್ಧೆ
Update: 2022-05-11 09:40 IST
ಬಂಟ್ವಾಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಿ.ಸಿ. ರೋಡು ಇದರ ಆಶ್ರಯದಲ್ಲಿ ಬಿಸಿ ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ “ಕರಾವಳಿ ಕಲೋತ್ಸವ-2022” ಕಾರ್ಯಕ್ರಮದ ಪ್ರಯುಕ್ತ ಮೇ 12ರಂದು ಸಂಜೆ 7 ಗಂಟೆಗೆ ರಾಜ್ಯಮಟ್ಟದ ಕರಾವಳಿ ದಫ್ ಸ್ಪರ್ಧೆ ನಡೆಯಲಿದೆ.
ಸ್ಪರ್ಧಾ ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ, ಭಾಗವಹಿಸಿದ ತಂಡಗಳಿಗೆ ಪ್ರೋತ್ಸಾಹಕ ನಗದು ಗೌರವ, ಉತ್ತಮ ಹಾಡುಗಾರರ ಪ್ರಶಸ್ತಿ ನೀಡಲಾಗುವುದು.
ದಫ್ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರಾವಳಿ ದಫ್ ಸ್ಪರ್ಧಾ ಕಾರ್ಯಕ್ರಮದ ಪ್ರಧಾನ ಸಂಚಾಲಕ ಮುಹಮ್ಮದ್ ನಂದಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.