ಇನ್‌ಸ್ಟಾಗ್ರಾಮ್ ನಲ್ಲಿ ರವೀಂದ್ರ ಜಡೇಜರನ್ನು ಅನ್‌ಫಾಲೋ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್!

Update: 2022-05-12 07:24 GMT

ಹೊಸದಿಲ್ಲಿ: ಸುಮಾರು 10 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅವಿಭಾಜ್ಯ ಅಂಗವಾಗಿರುವ ಆಲ್‌ರೌಂಡರ್ ರವೀಂದ್ರ ಜಡೇಜ ಅವರನ್ನು ತನ್ನ  ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫ್ರಾಂಚೈಸಿವು  ಅನ್‌ಫಾಲೋ ಮಾಡಿದೆ.

ಜಡೇಜ ಅವರು ಮೇ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಗಾಯದ ಸಮಸ್ಯೆ ಎದುರಿಸಿದ ಕಾರಣದಿಂದಾಗಿ ಈಗ ನಡೆಯುತ್ತಿರುವ ಐಪಿಎಲ್ ನಿಂದ ಹೊರಗುಳಿದಿದ್ದಾರೆ.

ರವೀಂದ್ರ ಜಡೇಜ ಅವರು ನಿಗಾದಲ್ಲಿದ್ದಾರೆ. ವೈದ್ಯಕೀಯ ಸಲಹೆಯ ಆಧಾರದ ಮೇಲೆ ಅವರನ್ನು ಉಳಿದ ಐಪಿಎಲ್ ಸೀಸನ್‌ ನಿಂದ ಹೊರಗಿಡಲಾಗಿದೆ ಎಂದು ಸಿಎಸ್‌ಕೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಆಲ್‌ರೌಂಡರ್‌ ಜಡೇಜರ ಹಠಾತ್ ನಿರ್ಗಮನ ಹಾಗೂ ಇನ್ ಸ್ಟಾಗ್ರಾಮ್ ನಲ್ಲಿ ಜಡೇಜರನ್ನು ಅನುಸರಿಸದಿರುವುದು ಫ್ರಾಂಚೈಸಿಯೊಂದಿಗೆ ಬಿರುಕು ಮೂಡಿರುವ ವದಂತಿಗಳನ್ನು ಹುಟ್ಟುಹಾಕಿದೆ.

ತಂಡದಲ್ಲಿನ ಕೆಲವು ಸಮಸ್ಯೆಗಳಿಂದಾಗಿ ಜಡೇಜ ಹಠಾತ್ ಆಗಿ  ಐಪಿಎಲ್ ಅನ್ನು ತೊರೆದಿದ್ದಾರೆ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News