ಏರ್ ಇಂಡಿಯಾದ ಸಿಇಒ, ಎಮ್‌ಡಿಯಾಗಿ ಕ್ಯಾಂಪ್ ಬೆಲ್ ವಿಲ್ಸನ್ ನೇಮಕ

Update: 2022-05-12 16:46 GMT

ಹೊಸದಿಲ್ಲಿ, ಮೇ 12: ಸಿಂಗಪುರ ವಿಮಾನ ಯಾನ ಸಂಸ್ಥೆ ‘ಸ್ಕೂಟ್’ನ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ಯಾಂಪ್ಬೆಲ್ ವಿಲ್ಸನ್ ಅವರನ್ನು ಟಾಟಾ ಸನ್ಸ್ ಬುಧವಾರ ಏರ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಒ) ಹಾಗೂ ಆಡಳಿತ ನಿರ್ದೇಶಕ (ಎಂಡಿ)ರನ್ನಾಗಿ ನೇಮಕ ಮಾಡಿದೆ. 

ವಿಲ್ಸನ್ ಅವರ ನೇಮಕಾತಿಗೆ ಏರ್ ಇಂಡಿಯಾ ಮಂಡಳಿ ಅನುಮೋದನೆ ನೀಡಿದೆ ಎಂದು ಟಾಟಾ ಸನ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ‘ವಿಲ್ಸನ್ ಅವರಿಗೆ ವಿಮಾನ ಯಾನ ಉದ್ಯಮದಲ್ಲಿ 26 ವರ್ಷಗಳ ಅನುಭವ ಇದೆ’ ಎಂದು ಹೇಳಿಕೆ ತಿಳಿಸಿದೆ. ವಿಲ್ಸನ್ ಅವರು 2011ರಲ್ಲಿ ‘ಸ್ಕೂಟ್’ನ ಸ್ಥಾಪಕ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿದ್ದರು. ಅನಂತರ ಅದನ್ನು 2016ರ ವರೆಗೆ ಮುನ್ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News