ಎಲಿಮಲೆ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷರಾಗಿ ಲತೀಫ್ ಹರ್ಲಡ್ಕ ಪುನರಾಯ್ಕೆ
ಸುಳ್ಯ, ಮೇ 14: ಎಲಿಮಲೆಯ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ನ ಅಧ್ಯಕ್ಷರಾಗಿ ಲತೀಫ್ ಹರ್ಲಡ್ಕ ಪುನರಾಯ್ಕೆಯಾಗಿದ್ದಾರೆ.
ಎಲಿಮಲೆ ಮದ್ರಸ ವಠಾರದಲ್ಲಿ ಜರುಗಿದ ಅಸೋಸಿಯೇಶನ್ ನ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸಭೆಯನ್ನು ಸಂಸ್ಥೆಯ ಉಪಾಧ್ಯಕ್ಷ ಸೂಫಿ ಮುಸ್ಲಿಯಾರ್ ಉದ್ಘಾಟಿಸಿದರು. ಲತೀಫ್ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಸಿದ್ದೀಕ್ ಎಲಿಮಲೆ ವಾರ್ಷಿಕ ವರದಿ ವಾಚಿಸಿದರು. ಸೂಪಿ ಎಲಿಮಲೆ ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿದರು. ಎಲಿಮಲೆ ಮಸೀದಿಯ ಮುದರ್ರಿಸ್ ಜೌಹರ್ ಅಹ್ಸನಿ ದುಆಗೈದರು.
ಇದೇವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಲತೀಫ್ ಹರ್ಲಡ್ಕ ಪುನರಾಯ್ಕೆ ಯಾದರು. ಉಪಾಧ್ಯಕ್ಷರಾಗಿ ಜಿ.ಎಸ್ ಅಬ್ದುಲ್ಲ, ಸೂಫಿ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಸೂಫಿ ಎಲಿಮಲೆ, ಜತೆ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ, ಅಶ್ರಫ್ ದಿನಸಿ ಬಜಾರ್, ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್ ಪಾಣಾಜೆ ಆಯ್ಕೆಯಾದರು.
ಸದಸ್ಯರುಗಳಾಗಿ ಶಿಹಾಬ್ ಪಾಣಾಜೆ, ಹೈದರ್ ಹಾಜಿ, ಅಬ್ದುಲ್ ಖಾದರ್ ಅತ್ತಿಮಾರಡ್ಕ, ಹನೀಫ್ ಜೀರ್ಮುಕ್ಕಿ, ಸುಲೈಮಾನ್ ಮೆತ್ತಡ್ಕ, ಮಹಮೂದ್ ಸಖಾಫಿ, ನಾಸಿರ್ ದೊಡ್ಡಂಗಡಿ, ಇಬ್ರಾಹೀಂ ಜೀರ್ಮುಕ್ಕಿ, ಸತ್ತಾರ್ ಮೇಲೆಬೈಲು, ಹಾರಿಸ್ ಪಳ್ಳಿಕಲ್,
ಆಸಿಫ್ ಹೊಟ್ಟಿಚೋಡಿ ಆಯ್ಕೆಯಾದರು.
ಸಮಿತಿಯ ಗೌರವ ಸಲಹೆಗಾರರಾಗಿ ಅಲ್ಹಾಜ್ ತೌಸೀಫ್ ಸಅದಿ ಹರೇಕಳ, ಮುಹಮ್ಮದ್ ಇಕ್ಬಾಲ್ ಎಲಿಮಲೆ, ಅಬೂಬಕರ್ ಪಾಣಾಜೆ, ಮುಹಮ್ಮದ್ ಕುಂಞಿ ಮೇಲೆಬೈಲು ಅವರನ್ನು ಆರಿಸಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಎಲಿಮಲೆ ಜಮಾಅತ್ ಸಮಿತಿಯ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಎಲಿಮಲೆ, ಜಮಾಅತ್ ಸಮಿತಿಯ ಮಾಜಿ ಅಧ್ಯಕ್ಷ ಮೂಸ ಹಾಜಿ ಜೀರ್ಮುಕಿ, ಕೋಶಾಧಿಕಾರಿ ಮಹಮೂದ್ ಮುಸ್ಲಿಯಾರ್ ದೊಡ್ಡಂಗಡಿ, ಜೀರ್ಮಕ್ಕಿ ಮಸೀದಿಯ ಅಧ್ಯಕ್ಷ ಸಿದ್ದೀಕ್ ಜಿರ್ಮುಕ್ಕಿ, ಮುಹಮ್ಮದ್ ಕುಂಞಿ ಮೇಲೆಬೈಲು ಉಪಸ್ಥಿತರಿದ್ದರು.
ಸೂಫಿ ಎಲಿಮಲೆ ಸ್ವಾಗತಿಸಿ, ವಂದಿಸಿದರು.