ಮಂಗಳೂರು: ರಾಷ್ಟ್ರಮಟ್ಟದ ಚೆಸ್ ಪಂದ್ಯಾಟಕ್ಕೆ ಚಾಲನೆ

Update: 2022-05-14 16:03 GMT

ಮಂಗಳೂರು : ರಾಷ್ಟ್ರ ಮಟ್ಟದ ಎರಡು ದಿನಗಳ ಫಿಡೆ ರ್ಯಾಪಿಡ್ ರೇಟೆಡ್ ಚೆಸ್ ಪಂದ್ಯಾಟಕ್ಕೆ ಶನಿವಾರ ನಗರದ ಪುರಭವನದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಹಾಗೂ ಪ್ರಾಂತ ಮುಖ್ಯಸ್ಥ ಮಹೇಶ ಜೆ. ಚಾಲನೆ ನೀಡಿದರು.

ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸುನೀಲ್ ಆಚಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದ.ಕ. ಜಿಲ್ಲಾ ಉಪನಿರ್ದೇಶಕ ಪ್ರದೀಪ್ ಡಿಸೋಜ ಮುಖ್ಯ ಅತಿಥಿಗಳಾಗಿದ್ದರು.

ಅಸೋಸಿಯೇಶನ್ ಕಾರ್ಯದರ್ಶಿ ಅಭಿಷೇಕ್ ಕಟ್ಟೆಮಾರ್, ಕೋಶಾಧಿಕಾರಿ ಪೂರ್ಣಿಮಾ ಎಸ್.ಆಳ್ವ, ಸತ್ಯ ಪ್ರಸಾದ್ ಕೆ., ವಾಣೊ ಎಸ್.ಪಣಿಕ್ಕರ್ ಉಪಸ್ಥಿತರಿದ್ದರು.

ಕೇರಳ, ತಮಿಳುನಾಡು,ಗೋವಾ ಹಾಗೂ ಮಹಾರಾಷ್ಟ್ರ ಸಹಿತ ದೇಶದ ವಿವಿಧೆಡೆಯ ೩೨೦ ಸ್ಪರ್ಧಾಳುಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ಗ್ರ್ಯಾಂಡ್ ಮಾಸ್ಟರ್, ಇಂಟರ್‌ನ್ಯಾಷನಲ್ ಮಾಸ್ಟರ್ಸ್‌ಗಳೂ ಇದ್ದಾರೆ. ಅಲ್ಲದೆ ಕಲಬುರಗಿಯ ನಾಲ್ವರು ಅಂಧ ಸ್ಪರ್ಧಿಗಳು ಭಾಗವಹಿಸುತ್ತಿರುವುದು ಈ ಬಾರಿಯ ವಿಶೇಷ ವಾಗಿದೆ. ವಿಜೇತರಿಗೆ  2 ಲಕ್ಷ ರೂ.ಮೊತ್ತ ಹಾಗೂ ವಿವಿಧ ಟ್ರೋಫಿ ಒಳಗೊಂಡಿದೆ. ರವಿವಾರ  ಪಂದ್ಯ ಸಮಾರೋಪಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News