ಈ ಸೆಖೆಯ ವೇಳೆ ಹೆಚ್ಚು ವಿದ್ಯುತ್ ಬಿಲ್ ಬರದಂತೆ ಎಸಿಯನ್ನು ಬಳಸುವುದು ಹೇಗೆ?: ಮಾಹಿತಿ ಇಲ್ಲಿದೆ

Update: 2022-05-15 09:14 GMT
ಸಾಂದರ್ಭಿಕ ಚಿತ್ರ (PTI)

ಈ ಸಲ ಎಂದೂ ಕಂಡರಿಯದ ಬಿಸಿಲು ದೇಶಾದ್ಯಂತ ಇದೆ. ರಣ ಬಿಸಿಲು ಭಾರತದ ಹಲವಾರು ಭಾಗಗಳಲ್ಲಿ ಜನರಿಗೆ ತೊಂದರೆ ನೀಡಿದೆ. ಇದರಿಂದ ಹವಾನಿಯಂತ್ರಕಗಳ(AC) ಬೇಡಿಕೆಯು ಅನೇಕ ಪಟ್ಟು ಹೆಚ್ಚಾಗಿದೆ.

ACಗಳ ಹೆಚ್ಚಿನ ಬಳಕೆಯೊಂದಿಗೆ, ತಿಂಗಳ ಕೊನೆಯಲ್ಲಿ ವಿದ್ಯುತ್ ಬಿಲ್ ಅಧಿಕವಾಗಿರುತ್ತದೆ ಮತ್ತು ಇದು ಸಾಮಾನ್ಯವಾಗಿ ಎಲ್ಲರಿಗೂ ಅನ್ವಯವಾಗುತ್ತದೆ. ಈಗಿನ ಕಾಲದಲ್ಲಿ ಬಹುತೇಕ ಹವಾನಿಯಂತ್ರಕಗಳು ಉತ್ತಮ ತಾಪಮಾನ ಮತ್ತು ತೇವಾಂಶ ನಿಯಂತ್ರಣವನ್ನು ಒದಗಿಸುತ್ತವೆ ಮತ್ತು ಇದು ತಿಂಗಳ ಕೊನೆಯಲ್ಲಿ ವಿದ್ಯುತ್ ಬಿಲ್ ಅನ್ನು ಕೊಂಚ ಕಡಿಮೆ ಮಾಡಲು ಸಹಾಯ ಮಾಡುತ್ತದೆ.  

ಸದ್ಯ ನೀವು ಮನೆಯಲ್ಲಿ ಹಳೆಯ ಏರ್ ಕಂಡಿಷನರ್ ಹೊಂದಿದ್ದರೆ, AC ಅನ್ನು ವೇಗವಾಗಿ ತಂಪಾಗಿಸಲು ಸಹಾಯ ಮಾಡುವ ಕೆಲವು ಸರಳ ಮಾರ್ಗಗಳಿವೆ, ಇದು ವಿದ್ಯುತ್ ಶಕ್ತಿಯ ಬಳಕೆಯನ್ನು ಕಡಿಮೆ ಮಾಡಲು ಮತ್ತು ತಿಂಗಳ ಕೊನೆಯಲ್ಲಿ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಲಹೆ 1: ಎಸಿ ಆನ್ ಮಾಡಿದಾಗ ಕೋಣೆಯ ಬಾಗಿಲು, ಕಿಟಕಿಗಳು ಓಪನ್ ಇದ್ದರೆ ಎಲ್ಲವನ್ನೂ ಮುಚ್ಚುವುದು ಮುಖ್ಯ.  ಕೋಣೆಯಲ್ಲಿ ಯಾವುದೇ ಬಾಗಿಲು ಓಪನ್ ಇದ್ದರೆ, ಏರ್ ಕಂಡಿಷನರ್ ತಣ್ಣಗಾಗಲು ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಅದು ವಿದ್ಯುತ್ ಬಿಲ್ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಸಲಹೆ 2: AC ವೇಗವಾಗಿ ತಣ್ಣಗಾಗಲು ಸಹಾಯ ಮಾಡಲು, ನಿಯಮಿತವಾಗಿ ಆಗಾಗ್ಗೆ ಫಿಲ್ಟರ್‌ಗಳನ್ನು ಸ್ವಚ್ಛಗೊಳಿಸಲು ಸಲಹೆ ನೀಡಲಾಗುತ್ತದೆ.  ಆದ್ದರಿಂದ, ಯಾವುದೇ ಸಂದರ್ಭದಲ್ಲಿ, ಕೋಣೆಯ ಏರ್ ಕಂಡಿಷನರ್ ಸಾಕಷ್ಟು ತಂಪಾಗಿಲ್ಲ ಎಂದು ನೀವು ಭಾವಿಸಿದರೆ, ತಕ್ಷಣವೇ ಫಿಲ್ಟರ್ ಗಳನ್ನು ಸ್ವಚ್ಛಗೊಳಿಸಿ.  ಹೆಚ್ಚಿನ ಹವಾನಿಯಂತ್ರಣಗಳು ಬಳಕೆದಾರರಿಗೆ ಸ್ವತಃ ಫಿಲ್ಟರ್ ಗಳನ್ನು ಸ್ವಚ್ಛಗೊಳಿಸಲು ಅವಕಾಶ ನೀಡುತ್ತವೆ.  ಆದರೆ ನಿಮಗೆ ಅದರ ಬಗ್ಗೆ ತಿಳುವಳಿಕೆ ಇಲ್ಲದಿದ್ದರೆ, ಸೇವೆಗಾಗಿ AC  ಕಂಪನಿಯವರಿಗೆ ಕರೆ ಮಾಡಿ.  ಹೆಚ್ಚಿನ ಕಂಪನಿಗಳು ಮೊದಲ ವರ್ಷದಲ್ಲಿ ಉಚಿತ ಸೇವೆಯನ್ನು ನೀಡುತ್ತವೆ, ಆದರೆ ನಂತರದ ಸೇವೆಗೆ ಒಂದಿಷ್ಟು ಹಣ ಪಾವತಿಸಬೇಕಾಗಿ ಬರಬಹುದು.

ಸಲಹೆ 3: ಹವಾನಿಯಂತ್ರಣವನ್ನು ಆನ್ ಮಾಡಿದಾಗ ಫ್ಯಾನ್ ಅನ್ನು ಆನ್ ಮಾಡುವುದು ಉತ್ತಮ ಕೂಲಿಂಗ್‌ಗೆ ಸಹಾಯ ಮಾಡುತ್ತದೆ.  ಇದು ಕೋಣೆಯ ಉದ್ದಕ್ಕೂ ತಂಪಾದ ಗಾಳಿಯನ್ನು ಪ್ರಸಾರ ಮಾಡಲು ಸಹಾಯ ಮಾಡುತ್ತದೆ.

ಸಲಹೆ 4: ಎಸಿ ಕೊಠಡಿಯನ್ನು ಚೆನ್ನಾಗಿ ತಂಪಾಗಿಸಲು, ಲೈಟ್‌ಗಳನ್ನು ಆಫ್ ಮಾಡಿ.  ದೀಪಗಳನ್ನು ಆಫ್ ಮಾಡುವುದರಿಂದ ಕೋಣೆಯಲ್ಲಿನ ಶಾಖದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ACಯು ಕೊಠಡಿಯನ್ನು ಉತ್ತಮವಾಗಿ ತಂಪಾಗಿಸುತ್ತದೆ.  ಅಡಿಗೆ ಮತ್ತು ಬಾತ್ ರೂಮ್ ನಲ್ಲಿ ಎಕ್ಸಾಸ್ಟ್ ಫ್ಯಾನ್ ಗಳನ್ನು ಆಫ್ ಮಾಡುವುದರಿಂದ ಉತ್ತಮ ತಂಪಾಗಿಸುವಿಕೆಗೆ ಸಹಾಯ ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News