ಬೆಳಗ್ಗಿನ ಆಝಾನ್; ಉಲೆಮಾ ಸಭೆಯಲ್ಲಿ ತೀರ್ಮಾನ: ಶಾಫಿ ಸಅದಿ

Update: 2022-05-15 14:09 GMT

ಉಡುಪಿ : ಮಸೀದಿಗಳಲ್ಲಿ ಬೆಳಗ್ಗಿನ ಆಝಾನ್ ಹೊರತುಪಡಿಸಿ ಉಳಿದ ಯಾವುದೇ ಆಝಾನ್‌ಗಳಿಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ತೊಂದರೆ ಆಗುವುದಿಲ್ಲ. ಆದುದರಿಂದ ಬೆಳಗ್ಗಿನ ಆಝಾನ್ ಕುರಿತು ಕರಾವಳಿ ಜಿಲ್ಲೆಗಳ ಉಲೆಮಾಗಳು ಎರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ ತಿಳಿಸಿದ್ದಾರೆ.

ಉಡುಪಿ ಪ್ರವಾಸಿ ಮಂದಿರದಲ್ಲಿ ರವಿವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನ ತೀರ್ಪಿನಂತೆ ರಾತ್ರಿ 10ಗಂಟೆಯಿಂದ ಬೆಳಗ್ಗೆ 6ಗಂಟೆ ಅವಧಿಯಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರವಲ್ಲದೆ ಯಾವುದೇ ಕಾರ್ಯಕ್ರಮಗಳಲ್ಲಿಯೂ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಇದರಿಂದ ಆಝಾನ್‌ಗಳಿಗೆ ಮಾತ್ರವಲ್ಲದೆ ಮಠಮಂದಿರಗಳಿಗೂ ತೊಂದರೆ ಆಗುತ್ತದೆ. ಈ ಕುರಿತು ಈಗಾಗಲೇ ಸಂಪರ್ಕಿ ಸಿದ ವಿವಿಧ ಸ್ವಾಮೀಜಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದರು.

ಧ್ವನಿವರ್ಧಕ ಬಳಕೆ ಕುರಿತು ವಕ್ಫ್ ಮಂಡಳಿ 2021ರ ಮಾರ್ಚ್‌ನಲ್ಲಿ ಮತ್ತು  ಡೆಸಿಬಲ್ ಕುರಿತು 2021ರ ನವೆಂಬರ್‌ನಲ್ಲಿ ಎಲ್ಲ ಮಸೀದಿಗಳಿಗೆ ಸುತ್ತೋಲೆ ಹೊರಡಿಸಿತ್ತು. ಆದರೆ ಈಗ ಸುಪ್ರೀಂ ಕೋರ್ಟ್ ತೀರ್ಪು ಪಾಲಿಸುವಂತೆ ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗಿನ ಆಝಾನ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದು ಶರೀಯತ್ ವಿಚಾರವಾಗಿರುವುದ ರಿಂದ ಉಲೆಮಾಗಳೇ ತೀರ್ಮಾನ ತೆಗೆದುಕೊಳ್ಳಬೇಕು. ಈ ಬಗ್ಗೆ ವಕ್ಫ್ ಬೋರ್ಡ್ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಉಲೆಮಾಗಳು ಈಗಾಗಲೇ ಸಭೆ ಕರೆದು ತೀರ್ಮಾನ ತೆಗೆದುಕೊಂಡಿದ್ದಾರೆ. ಅದೇ ರೀತಿ ಕರಾವಳಿಯಲ್ಲೂ ಒಮ್ಮತದ ತೀರ್ಮಾನಕ್ಕೆ ಬರಬೇಕಾಗಿದೆ. ನಮ್ಮಿಂದ ಯಾರಿಗೂ ಯಾವುದೇ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಉಲೆಮಾಗಳು ಉತ್ತಮ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಮದ್ರಸಗಳಲ್ಲಿ ರಾಷ್ಟ್ರಗೀತೆ

ರಾಜ್ಯದ ಸುಮಾರು 2000 ಮದ್ರಸಗಳಲ್ಲಿ ಈಗಾಗಲೇ ರಾಷ್ಟ್ರಗೀತೆಯನ್ನು ಹಾಡಲಾಗುತ್ತಿದೆ ಮತ್ತು ದೇಶ ಪ್ರೇಮದ ಭೋದನೆಗಳನ್ನು ಪಠ್ಯದಲ್ಲಿಯೇ ಅಳವಡಿಸಲಾಗಿದೆ. ವಕ್ಫ್ ಅಧೀನದಲ್ಲಿರುವ 1900 ಮದ್ರಸಗಳ ಲ್ಲಿಯೂ ರಾಷ್ಟ್ರ ಗೀತೆ ಹಾಡುವ ಕುರಿತು ವಕ್ಫ್ ಮಂಡಳಿಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗು ವುದು ಎಂದು ಅವರು ತಿಳಿಸಿದರು.

ರಾಷ್ಟ್ರಗೀತೆ ಹಾಡಿಸುವ ಅಭಿಯಾನದ ಪ್ರಶ್ನೆಯೇ ಬರುವುದಿಲ್ಲ. ಯಾರು ಯಾರ ಮೇಲೆಯೂ ಯಾವುದನ್ನು ಕೂಡ ಹೇರಲು ಆಗುವುದಿಲ್ಲ. ಅಭಿಯಾನ ಮಾಡುವವರಿಗೆ ರಾಷ್ಟ್ರಪ್ರೇಮ ಇದೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕಾಗಿದೆ. ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದವರು ರಾಷ್ಟ್ರಪ್ರೇಮ ಕಲಿಸಲು ಮುಂದಾಗುತ್ತಿ ದ್ದಾರೆ. ಒಬ್ಬ ವ್ಯಕ್ತಿ ಹೇಳಿದ ತಕ್ಷಣ ಸರಕಾರವೂ, ಸಮುದಾಯವೂ ಮನ್ನಣೆ ಕೊಡುವುದಿಲ್ಲ. ಸಂವಿಧಾನಬದ್ಧವಾಗಿ ಬದುಕಲು ಎಲ್ಲರಿಗೂ ಅವಕಾಶ ಇದೆ ಎಂದರು.

ಕೊಡವೂರು ಕಲ್ಮತ್ ಮಸೀದಿ ವಿವಾದಕ್ಕೆ ಸಂಬಂಧಿಸಿ ಶಾಸಕರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಮಾತು ಕತೆ ನಡೆಸಲಾಗಿದೆ. ರಮಾಝಾನ್‌ನಲ್ಲಿ ಮಸೀದಿಯಲ್ಲಿ ನಮಾಝ್‌ಗೆ ಅವಕಾಶ ಕಲ್ಪಿಸುವಂತೆ ವಿನಂತಿಸಲಾ ಗಿತ್ತು. ಅದಕ್ಕೆ ಅವರೆಲ್ಲ ಸಕಾರಾತ್ಮಕವಾಗಿ ಸ್ಪಂದಿಸಿ, ರಮಝಾನ್ ಮುಗಿದ ಬಳಿಕ ಚರ್ಚಿಸುವ ಬಗ್ಗೆ ತಿಳಿಸಿದ್ದಾರೆ. ಅದನ್ನು ಶೀಘ್ರವೇ ಇತ್ಯರ್ಥ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಕ್ಫ್ ಮಂಡಳಿಯ ಸದಸ್ಯ ಜಿ.ಯಾಕೂಬ್ ಸಾಹೇಬ್, ವಕ್ಫ್ ಸಲಹಾ ಮಂಡಳಿಯ ಮಾಜಿ ಉಡುಪಿ ಜಿಲ್ಲಾಧ್ಯಕ್ಷರಾದ ಮಟಪಾಡಿ ಇಬ್ರಾಹಿಂ, ಯಾಹ್ಯ ನಕ್ವಾ, ವಕ್ಫ್ ಅಧಿಕಾರಿ ನಾಝೀಯಾ, ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ ಉಪಸ್ಥಿತರಿದ್ದರು.

10 ಜಿಲ್ಲೆಗಳಲ್ಲಿ 10 ಮಹಿಳಾ ಕಾಲೇಜು

ರಾಜ್ಯದ ವಕ್ಫ್ ಆಸ್ತಿಗಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಂತೆ ಬೆಂಗಳೂರಿನ ಬಡೆ ಮಕಾನ್‌ನಲ್ಲಿ 15 ಕೋಟಿ ರೂ. ವೆಚ್ಚದ ಐಎಎಸ್ ಐಪಿಎಸ್ ತರಬೇತಿ ಕೇಂದ್ರ, ತುಮಕೂರು ದರ್ಗಾ ಅಧೀನದಲ್ಲಿ ಮಹಿಳೆ ಕಾಲೇಜು, ಬೆಂಗಳೂರಿನ 9 ಕೋಟಿ ವೆಚ್ಚದ ಮಹಿಳಾ ಕಾಲೇಜು ಮತ್ತು ಹಾಸ್ಟೆಲ್‌ಗೆ ಜೂನ್ ಮೊದಲ ವಾರದಲ್ಲಿ ಶಿಲಾನ್ಯಾಸ ನೆರ ವೇರಿಸಲಾಗುವುದು ಎಂದು ಶಾಫಿ ಸಅದಿ ತಿಳಿಸಿದರು.

10 ಜಿಲ್ಲೆಗಳಲ್ಲಿ 10 ಮಹಿಳಾ ಕಾಲೇಜು ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಜಾಗಗಳನ್ನು ಗುರಿತಿಸಲಾಗಿದ್ದು, ಜೂನ್ ಅಂತ್ಯಕ್ಕೆ ಈ ಯೋಜನೆ ಕೈಗೆತ್ತಿಕೊಳ್ಳ ಲಾಗುವುದು. ವಕ್ಫ್ ಆಸ್ತಿಗಳು ಅತಿಕ್ರಮಣ ಆಗುತ್ತಿರುವ ಹಿನ್ನೆಲೆಯಲ್ಲಿ ಇವುಗಳ ಡ್ರೋನ್ ಸರ್ವೆಗೆ ರಾಜ್ಯ ಸರಕಾರ 2.5 ಕೋಟಿ ರೂ. ಅನುದಾನ ಒದಗಿಸಿದೆ. ಆದಷ್ಟು ಬೇಗ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಮಂಡಳಿಯ ಕೇಂದ್ರ ಕಚೇರಿಗೆ ಮೂಲಭೂತ ಸೌಕರ್ಯಗಳು ಒದಗಿಸಲು ಮತ್ತು ದಾಖಲೆ ಗಳನ್ನು ಡಿಜಿಟಲೀಕರಣ ಮಾಡಲು ಸರಕಾರ 2 ಕೋಟಿ ರೂ. ಅನುದಾನ ನೀಡಿದೆ ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News