ಅಮೇರಿಕಾದ ಮೆಸಾಚುಸೆಟ್ಸ್‌ನಲ್ಲಿ ಮೊಟ್ಟ ಮೊದಲ ʼದಲಿತ ಕಲಾ ಪ್ರದರ್ಶನʼ

Update: 2022-05-15 15:42 GMT
Photo: facebook.com/Adavi-Myah-418614912032726

ಮೆಸಾಚುಸೆಟ್ಸ್‌ (ಯುಎಸ್‌ಎ): ಇಲ್ಲಿನ ಸೋಮರ್‌ವಿಲ್ಲೆ ನಗರದಲ್ಲಿ ಯುನೈಟೆಡ್ ಸ್ಟೇಟ್ಸ್‌ನ (ಅಮೇರಿಕಾದ) ಮೊಟ್ಟಮೊದಲ ದಲಿತ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಿಶೇಷವಾಗಿ ದಲಿತ ಮತ್ತು ಬಹುಜನ ಕಲಾವಿದರ ಕಲೆಗಳ ಪ್ರದರ್ಶನ ನಡೆದಯಲಿದ್ದು, ಏಪ್ರಿಲ್ 30 ರಂದು ಇದು ಆರಂಭಗೊಂಡಿದೆ. 

ದಲಿತ ಮತ್ತು ಬಹುಜನ ಮಹಿಳೆಯರ ನೇತೃತ್ವದ ಕಲಾ ಸಮೂಹವಾದ ಅಡವಿ ಮ್ಯಾಹ್‌ (Adavi Myah) ಆಯೋಜಿಸಿರುವ ಈ ಪ್ರದರ್ಶನವು ಮೇ 30, 2022 ರವರೆಗೆ ನಾಲ್ಕು ವಾರಗಳ ಕಾಲ ನಡೆಯಲಿದೆ. 'ವೇರ್ ಆರ್ಟ್ ಬಿಲಾಂಗ್ಸ್' ಶೀರ್ಷಿಕೆಯಡಿ, ದೃಶ್ಯ ಕಲೆ, ಕವನ ಮತ್ತು ಸಂಗೀತ ಸೇರಿದಂತೆ 40 ಕ್ಕೂ ಹೆಚ್ಚು ಕಲಾವಿದರ ಕೆಲಸಗಳನ್ನು ಪ್ರದರ್ಶಿಸಲಾಗುತ್ತಿದೆ.

ಅಡವಿ ಮ್ಯಾಹ್‌ ಅನ್ನು 2018 ರಲ್ಲಿ ಸ್ಥಾಪಿಸಲಾಗಿದೆ. ಅಡವಿ ಮ್ಯಾಹ್ ಅನ್ನುವುದು ತೆಲುಗು ಮತ್ತು ಛತ್ತೀಸ್‌ಗಢದ ಪದಗಳ ಸಂಯೋಜನೆಯಾಗಿದ್ದು, ಇದರರ್ಥ "ಕಾಡಿನ ಪ್ರೀತಿ" ಎಂದು. ತುಳಿತಕ್ಕೊಳಗಾದ ಜಾತಿ ಸಮುದಾಯದ ಹೋರಾಟಗಳು ಮತ್ತು ಕಲೆಯ ಮೂಲಕ ಪ್ರತಿಬಿಂಬಿಸಲು ಇದನ್ನು ರೂಪುಗೊಳಿಸಲಾಗಿದೆ.

ದಲಿತ ಮತ್ತು ಬಹುಜನ ಸಮುದಾಯದಲ್ಲಿನ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸುವುದು ಈ ಪ್ರದರ್ಶನದ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಅಡವಿ ಮ್ಯಾಹ್‌ ಸಹ-ಸಂಸ್ಥಾಪಕಿ ಡಾಲಿ ಅರ್ಜುನ್ ಹೇಳಿದ್ದಾರೆ. ಭಾರತ ಮತ್ತು ಭಾರತೀಯರ ಬಗ್ಗೆ ಮುಖ್ಯವಾಹಿನಿಯ ನಿರೂಪಣೆ ಉದ್ದೇಶವನ್ನು ಬದಲಾಯಿಸಲು ಈ ಕೆಲಸವನ್ನು ಯುಎಸ್‌ನಲ್ಲಿ ಪ್ರದರ್ಶಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. 

"ಜಾತಿ-ಆಧಾರಿತ ದಬ್ಬಾಳಿಕೆಯು ಪರಿಣಾಮ ಬೀರುವ ಜನರ ತೀವ್ರತೆ ಮತ್ತು ಜನಸಂಖ್ಯೆಗಳ ಹೊರತಾಗಿಯೂ, ಯುನೈಟೆಡ್‌ ಸ್ಟೇಟ್ಸ್‌ ನ ಅನೇಕರು (ಭಾರತದಲ್ಲಿರುವ) ಜಾತೀಯತೆಯ ಬಗ್ಗೆ ತಿಳಿದಿಲ್ಲ. ಏಕೆಂದರೆ ಶೋಷಕ ಜಾತಿಯ ಹಿನ್ನೆಲೆಯ ವಲಸಿಗರು ಇಲ್ಲಿಯ ಮುಖ್ಯವಾಹಿನಿಯ ನಿರೂಪಣೆಯನ್ನು ರಚಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News