ಗುನಾ: ಎನ್‌ಕೌಂಟರ್‌ನಲ್ಲಿ ಇಬ್ಬರು ಕಾಡುಗಳ್ಳರ ಹತ್ಯೆ

Update: 2022-05-15 16:50 GMT

  ಗುನಾ (ಮ.ಪ್ರ.), ಮೇ 15: ಗುನಾ ಗುಂಡಿನ ಕಾಳಗದ ಘಟನೆಗೆ ಸಂಬಂಧಿಸಿ ಮಧ್ಯಪ್ರದೇಶ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ಕಾಡುಗಳ್ಳರನ್ನು ಎನ್ಕೌಂಟರ್ ಮಾಡಲಾಗಿದೆಯೆಂಬ ವರದಿಗಳನ್ನು ಪೊಲೀಸ್ ಅಧೀಕ್ಷಕ ರಾಜೀವ್ ಕುಮಾರ್ ಮಿಶ್ರಾ ರವಿವಾರ ನಿರಾಕರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಕ್ರಿಮಿನಲ್‌ಗಳು ಗುಂಡೇಟಿನಿಂದ ಸಾವನ್ನಪ್ಪಿದರೆ, ಉಳಿದಿಬ್ಬರನ್ನು ಬಂಧಿಸಲಾಗಿದೆಯೆಂದು ಅವರು ಹೇಳಿದ್ದಾರೆ.

  ಶನಿವಾರ ಮುಂಜಾನೆ ಗುನಾ ಜಿಲ್ಲೆಯ ಅರಣ್ಯವೊಂದರಲ್ಲಿ ಕಾಡುಗಳ್ಳರು ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಕಾಡುಗಳ್ಳರ ಬಗ್ಗೆ ದೊರೆತ ಸುಳಿವಿನ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಕಾಳಗ ಭುಗಿಲೆದ್ದಿತ್ತು.

  ಆನಂತರ ಪೊಲೀಸರು ನಡೆಸಿದ ಕಾಡುಗಳ್ಳರ ವಿರುದ್ಧ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಇಬ್ಬರನ್ನು ಹತ್ಯೆಗೈಯಲಾಗಿದ್ದು, ಇನ್ನಿಬ್ಬರನ್ನು ಬಂಧಿಸಲಾಗಿದೆ. ಉಳಿದ ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಗುನಾ ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News