ಮಸೂದ್ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಕಾರ್ಯಕ್ರಮ, ವಾರ್ಷಿಕ ದಿನಾಚರಣೆ

Update: 2022-05-16 15:56 GMT

ಮಂಗಳೂರು, ಮೇ 16:  ಮಸೂದ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್  ವತಿಯಿಂದ  ಹಮ್ಮಿಕೊಂಡಿದ್ದ ಮಸೂದ್  ನರ್ಸಿಂಗ್ ಕಾಲೇಜ್ ಮತ್ತು ನರ್ಸಿಂಗ್ ಸ್ಕೂಲ್, ಮಸೂದ್ ಪಿಸಿಯೋ ಥೆರಪಿ ಕಾಲೇಜು ಇದರ ವಾರ್ಷಿಕ ದಿನಾಚರಣೆ ಮತ್ತು ಡಿಪ್ಲೋಮಾ, ಪದವಿ ಪ್ರದಾನ ಮತ್ತು ಬಿಎಸ್ಸಿ ನರ್ಸಿಂಗ್ ಹೊಸ ತರಗತಿಗಳ ಉದ್ಘಾಟನಾ ಸಮಾರಂಭ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಮತ್ತು ಮಸೂದ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಲ್ ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರು ಮಾತನಾಡಿ ಸಂಸ್ಥೆ ಸಾಧಿಸಿದ ಪ್ರಗತಿಗೆ ಪ್ರಶಂಸೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ  ಕರ್ನಾಟಕ ರಾಜ್ಯ ಐಎಪಿ ಅಧ್ಯಕ್ಷ ಮತ್ತು ರಾಜೀವ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯ, ರಾಜ್ಯ ಐಎಪಿ ಘಟಕದ ಅಧ್ಯಕ್ಷ ಡಾ.ಇಫ್ತಿಕಾರ್ ಅಲಿ ಮಾತನಾಡುತ್ತಾ, ಆರೋಗ್ಯ ಸೇವಾ ಕ್ಷೇತ್ರದಲ್ಲಿ ನರ್ಸಿಂಗ್ ಮಹತ್ವದ ಕ್ಷೇತ್ರವಾಗಿದೆ. ಕೊರೋನದ ಸಂದರ್ಭದಲ್ಲಿ ದಾದಿ(ನರ್ಸ್)ಯರು ಭಾರೀ ಶ್ರಮವಹಿಸಿ ಸಮಾಜಕ್ಕಾಗಿ ಜೀವವನ್ನು ಪಣ ಇಟ್ಟು ಸೇವೆಗೈದಿದ್ದಾರೆ. ಹಿರಿಯ ನಾಯಕ ಮಸೂದ್ ಅವರ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆ ಇನ್ನಷ್ಟು ಕೋರ್ಸ್ ಗಳ ಸೇರ್ಪಡೆಯೊಂದಿಗೆ ಇನ್ನಷ್ಟು ಪ್ರಗತಿ ಸಾಧಿಸಲಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಡಾ.ಸೋಮ ಶೇಖರಯ್ಯ ಕಲ್ಮಾತ್  ಮಾತನಾಡಿ, ನಾವು ಅಳವಡಿಸಿಕೊಂಡ ಗುಣಗಳು ನಮ್ಮ ಭವಿಷ್ಯವನ್ನು ತೀರ್ಮಾನಿಸುತ್ತವೆ. ಕರ್ನಾಟಕದಲ್ಲಿ ನರ್ಸಿಂಗ್ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಮಸೂದ್ ಶಿಕ್ಷಣ ಸಂಸ್ಥೆ ಉತ್ತಮ ಆಯ್ಕೆ. ಕಠಿಣ ಪರಿಶ್ರಮದೊಂದಿಗೆ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ ಆರಂಭಿಸಿ, ಬದುಕಿನಲ್ಲಿ  ಗುರಿ ಸಾಧನೆಗೆ ನಿರಂತರ ಪ್ರಯತ್ನ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ವೇದಿಕೆಯಲ್ಲಿ ಮಸೂದ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಗ್ರೇಟ್ಟಾ ತಾವ್ರೋ, ಉಪ ಪ್ರಾಂಶುಪಾಲೆ ವಿಜೇತ ಕೊಟ್ಟಾರಿ,  ಮಸೂದ್  ಫಿಸಿಯೋ ಥೆರಪಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಿಶಾ ರಫೀಕ್  ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಪುರಸ್ಕಾರ: ವಿವಿಧ ವಿಷಯಗಳಲ್ಲಿ ಅಂಕ ಗಳಿಸಿದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News