ಮಾಸ್ಟರ್ಸ್ ಈಜು ಸ್ಪರ್ಧೆ; ಮಂಗಳೂರಿನ ಸಂದೇಶ್ ತಿಂಗಳಾಯಗೆ 4 ಚಿನ್ನದ ಪದಕ

Update: 2022-05-17 07:28 GMT

ಮಂಗಳೂರು : ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ನಡೆದ ಮಾಸ್ಟರ್ಸ್ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಸಂದೇಶ್ ತಿಂಗಳಾಯ ಅವರು 50 ಮೀ. ಫ್ರೀಸ್ಟೈಲ್, 50 ಮೀ. ಬ್ಯಾಕ್ ಸ್ಟ್ರೋಕ್, 50 ಮೀ. ಬ್ರೇಥ್ ಸ್ಟ್ರೋಕ್ ಹಾಗೂ 200 ಮೀ. ಮೆಡ್ಲೆ ರಿಲೇಯಲ್ಲಿ ಚಿನ್ನದ ಪದಕ ಹಾಗೂ 200 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಅವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ ಅಭ್ಯಾಸ ನಡೆಸುತ್ತಿದ್ದು, ಅಲ್ಲಿಯೇ  ಕಾರ್ಯನಿರ್ವಹಿಸುತ್ತಿರುವ  ವಿ ಒನ್ ಆಕ್ವಾ ಸೆಂಟರ್ ನಲ್ಲಿ ಈಜು ತರಬೇತುದಾರರು ಕೂಡ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News