ಅಮೆರಿಕ : ಚರ್ಚ್‌ ನಲ್ಲಿ ಚೀನಾ ಮೂಲದ ವ್ಯಕ್ತಿಯಿಂದ ಗುಂಡಿನ ದಾಳಿ; ಓರ್ವ ಮೃತ್ಯು

Update: 2022-05-17 18:58 GMT

ಲಾಸ್ ಏಂಜಲೀಸ್, ಮೇ 17: ಲಾಸ್ಏಂಜಲೀಸ್ ಬಳಿಯ ಲಗುನಾ ವುಡ್ಸ್ ಗ್ರಾಮದ ಚರ್ಚ್ನಲ್ಲಿ ನಡೆಯುತ್ತಿದ್ದ ತೈವಾನ್-ಅಮೆರಿಕನ್ ಗೋಷ್ಟಿಯ ಮೇಲೆ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಇತರ 5 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
  ಚರ್ಚ್ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಸೇರಿದ್ದರು. ಆಗ 68 ವರ್ಷದ ಡೇವಿಡ್ ಚೌ ಎಂಬಾತ ಚರ್ಚ್ನೊಳಗೆ ಪ್ರವೇಶಿಸಿ ಸರಪಳಿಯಿಂದ ಚರ್ಚ್ನ ಬಾಗಿಲನ್ನು ಮುಚ್ಚಿದ ಬಳಿಕ ತನ್ನ ಬಳಿಯಿದ್ದ 2 ಪಿಸ್ತೂಲುಗಳಿಂದ ಅಲ್ಲಿದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿದ. ಇದು ಹತ್ಯಾಕಾಂಡ ನಡೆಸುವ ವಿಧಾನಬದ್ಧ ಪ್ರಯತ್ನವಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಚೀನಾ ಮೂಲದ ಚೌ ಅಮೆರಿಕದ ಪೌರತ್ವ ಪಡೆದಿದ್ದಾನೆ. ಲಾಸ್ ವೆಗಾಸ್ನಲ್ಲಿ ಭದ್ರತಾ ಸಿಬಂದಿಯಾಗಿ ಕೆಲಸ ಮಾಡುತ್ತಿದ್ದ ಈತ ಚೀನಾ ಮತ್ತು ತೈವಾನ್ ನಡುವಿನ ಉದ್ವಿಗ್ನತೆಯಿಂದ ಹತಾಶಗೊಂಡಿದ್ದ. ರಾಜಕೀಯ ಪ್ರೇರಿತ ದ್ವೇಷದ ಭಾವನೆಯಿಂದ ಈತ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯ ಯೋಜನೆಯನ್ನು ರೂಪಿಸಿದ್ದ ಈತ ಅದಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಂಡಿದ್ದ. ದಾಳಿಯ ಗುರಿಯನ್ನು ಆಯ್ಕೆ ಮಾಡಿಕೊಂಡಿರುವುದು, ತನ್ನ ಬಳಿಯಿದ್ದ ಆಯುಧಗಳನ್ನು ಚರ್ಚ್ನ ಸಭಾಂಗಣದೊಳಗೆ ಸಾಗಿಸಿದ್ದು ಇವೆಲ್ಲಾ ಯೋಜಿತ ಕೃತ್ಯವಾಗಿದೆ. ಅವಕಾಶ ಸಿಕ್ಕರೆ ಇನ್ನಷ್ಟು ಮಂದಿಯ ಹತ್ಯೆ ನಡೆಸಲು ಯೋಜಿಸಿದ್ದ ಎಂದು ಆರೆಂಜ್ ಕೌಂಟಿಯ ಆಡಳಿತಾಧಿಕಾರಿ ಶರೀಫ್ ಡಾನ್ಬಾರ್ನ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News