×
Ad

ಬೆಂಗಳೂರು | ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಅಪ್ಪಾಜಿ ಕ್ಯಾಂಟೀನ್ ನಲ್ಲಿ 1 ರೂ.ಗೆ ಊಟ

Update: 2022-05-18 15:01 IST

ಬೆಂಗಳೂರು, ಮೇ 18: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಹನುಮಂತನಗರದಲ್ಲಿರುವ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಇಂದು 1 ರೂಪಾಯಿಗೆ ಊಟ ವಿತರಿಸಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ಆಟೋ ಚಾಲಕರು, ಕಾರ್ಮಿಕರು ಬದುಕು ಸಾಗಿಸುವುದೇ ಕಷ್ಟವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು 10 ರೂಪಾಯಿಗೆ ರಾಜ್ಯ ಜೆಡಿಎಸ್ ವಕ್ತಾರ ಟಿ.ಎ. ಶರವಣ ಅನ್ನ ದಾಸೋಹ ನಡೆಸುತ್ತಿದ್ದಾರೆ. ಆದರೆ ಇಂದು ಇಲ್ಲಿ 1 ರೂ.ಗೆ ಊಟ ವಿತರಿಸಲಾಗುತ್ತಿದೆ

ಇಂದು ಅಪ್ಪಾಜಿ ಕ್ಯಾಂಟೀನ್ ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದರು. ಈ ವೇಳೆ ಕ್ಯಾಂಟೀನ್‌ಗೆ ಬಂದ ಗ್ರಾಹಕರಿಗೆ ಉಪಚರಿಸಿ ಗ್ರಾಹಕರಿಗೆ ಊಟ ಬಡಿಸಿದರು.

ಕ್ಯಾಂಟೀನ್ ನಲ್ಲಿ ಕೇಕ್ ಕತ್ತರಿಸಿ ದೇವೇಗೌಡರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಮಧ್ಯಾಹ್ನದ ಭೋಜನವಾಗಿ ರಾಗಿಮುದ್ದೆಯನ್ನು ಅಪ್ಪಾಜಿ ಕ್ಯಾಂಟೀನ್ ನಲ್ಲಿಯೇ ನಿಖಿಲ್ ಸವಿದರು. ಬಳಿಕ ಕ್ಯಾಂಟೀನ್ ಸಿಬ್ಬಂದಿಗಳ ಜೊತೆ ಕೆಲಹೊತ್ತು ನಿಖಿಲ್ ಕುಮಾರಸ್ವಾಮಿ ಕಾಲ ಕಳೆದರು.

ದೇವೇಗೌಡರ ವಿಚಾರಗಳನ್ನ ಅರ್ಥ ಮಾಡಿಕೊಂಡು ಕಳೆದ 5 ವರ್ಷಗಳಿಂದ ಬೆಂಗಳೂರಿನಲ್ಲಿ ಕಡಿಮೆ ಹಣಕ್ಕೆ ಊಟ ವಿತರಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಆಟೋ ಚಾಲಕರು, ಕಾರ್ಮಿಕರು ಬದುಕು ಸಾಗಿಸುವುದೇ ಕಷ್ಟವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು 10 ರೂಪಾಯಿಗೆ ರಾಜ್ಯ ಜೆಡಿಎಸ್ ವಕ್ತಾರ ಟಿ.ಎ. ಶರವಣ ಅನ್ನ ದಾಸೋಹ ನಡೆಸುತ್ತಿದ್ದಾರೆ. ಇದು ಹೀಗೆಯೇ ನಿರಂತರವಾಗಿ ಮುಂದುವರೆಯಲಿ ಎಂದು ಹೇಳಿದ್ದಾರೆ.

 ಈ ವೇಳೆ  ವಿಧಾನ ಪರಿಷತ್ ಮಾಜಿ ಶಾಸಕರು ಹಾಗೂ ರಾಜ್ಯ ಜೆಡಿಎಸ್ ವಕ್ತಾರ  ಟಿ.ಎ.ಶರವಣ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News